
ಪ್ರಗತಿವಾಹಿನಿ ಸುದ್ದಿ: ಯುಗಾದಿ ಹಬ್ಬದ ದಿನವೇ ಸಾಲು ಸಾಲು ದುರಂತಗಳು ಸಂಭವಿಸಿದ್ದು, ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಸೀತಿಮನಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸೋಮಶೇಖರ (16), ಪರನಗೌಡ (17) ಮಲ್ಲಪ್ಪ ಬಗಲ್ (16) ನೀರುಪಾಲಾದವರು. ಮೂವರಲ್ಲಿ ಸೋಮಶೇಖರ್ ಮೃತದೇಹ ಪತ್ತೆಯಾಗಿದೆ.
ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.