Latest

*ಕೃಷ್ಣಾನದಿಯಲ್ಲಿ ಮೀನಿನ ಬಲೆಗೆ ಸಿಲುಕಿ ಮೀನುಗಾರ ಸಾವು*

ಪ್ರಗತಿವಾಹಿನಿ ಸುದ್ದಿ: ಮೀನು ಹಿಡಿಯಲು ಹೋದ ಮೀನುಗಾರ ಕಾಲಿಗೆ ಮೀನಿನ ಬಲೆಗೆ ಸಿಲುಕಿ ಕೃಷ್ಣಾ ನದಿಯಲ್ಲಿ ಮುಳಗಿ ಸಾವನಪ್ಪಿದ ದುರ್ಘಟನೆ ನಡಿದಿದೆ. 

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಾಲೂಕಿನ ಕುಲಹಳ್ಳಿ ಗ್ರಾಮದ ಬಾವುಸಾಬ ಬಾಗಡೆ(42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಬಾವುಸಾಬ ಎಂದಿನಂತೆ ಮಹಿಷವಾಡಗಿ ಸೇತುವೆ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ಹಿಂದಿನ ದಿನ ಬಲೆ ಹಾಕಿ ಮರುದಿನ ಬಲೆ ತೆಗೆಯುವ ವೇಳೆ ಕಾಲಿಗೆ ಸಿಲುಕಿ ನೀರಲ್ಲಿ ಮಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Home add -Advt

ಈಜುಗಾರರ ತಂಡ ಹಾಗೂ ಅಗ್ನಿ ಶಾಮಕದಳದ ಸಹಾಯದಿಂದ ಶವಕ್ಕಾಗಿ ಶೋಧ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಸಿಪಿಐ ಸಂಜೀವ ಬಳಗಾರ, ಪಿಎಐ ಶಾಂತಾ ಹಳ್ಳಿ ಭೇಟಿ ನಡೆ ಪರಿಶೀಲನೆ ನಡೆಸಿದ್ದಾರೆ. ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Back to top button