
ಪ್ರಗತಿವಾಹಿನಿ ಸುದ್ದಿ: ಕಂದಾಯ ಸಚಿವ ಕೃಷ್ಣಬೈರೇಗೌಡ ಕಾರ್ಯವೈಖರಿಯನ್ನು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶ್ಲಾಘಿಸಿದ್ದರು. ಯಾವಾಗಲೂ ತಮ್ಮ ಕೆಲಸ, ಕಾರ್ಯಗಳ ಮೂಲಕವೇ ಸಚಿವ ಕೃಷ್ಣಬೈರೇಗೌಡ ಗಮನ ಸೆಳೆಯುತ್ತಾರೆ.
ಅಂತಯೇ ಇದೀಗ ಜನಸಾಮಾನ್ಯರಂತೆ ಸಚಿವರು ಬಸ್ ನಲ್ಲಿ ಪ್ರಯಾಣಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ತಮ್ಮ ಸರ್ಕಾರಿ ವಾಹನ, ಸ್ವಂತ ವಾಹನನವನ್ನು ಬಿಟ್ಟು ಸಾಮಾನ್ಯ ನಗರಿಕರಂತೆ ಬಸ್ ನಲ್ಲಿ ವಿಜಯಪುರಕ್ಕೆ ತೆರೆಳಿದ್ದಾರೆ.
ಜನಸಾಮಾನ್ಯರಂತೆ ಕಂದಾಯ ಸಚಿವರು ಬೆಂಗಳೂರಿನಿಂದ ವಿಜಯಪುರಕ್ಕೆ ಬಸ್ ನಲ್ಲಿ ಪ್ರಯಾಣಿಸಿದ್ದು, ಪ್ರಯಾಣಿಕರೂ ಅಚ್ಚರಿ ಜೊತೆಗೆ ಸಚಿವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.