
ವೇತನ ಪರಿಷ್ಕರಣೆ ಭರವಸೆ
ಪ್ರಗತಿವಾಹಿನಿ ಸುದ್ದಿ, ಹಳಿಯಾಳ: ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಬದ್ದರಿದ್ದೇವೆ. ವೇತನ ಪರಿಷ್ಕರಣೆ ಮಾಡಿ ಅನುಕೂಲ ಕಲ್ಪಿಸುತ್ತೇವೆ. ಮುಷ್ಕರದಂತಹ ಕ್ರಮಕ್ಕೆ ಮುಂದಾಗಬೇಡಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.


ಶಾಸಕ ಆರ್ ವಿ ದೇಶಪಾಂಡೆ ನೂತನ ಬಸ್ ನಿಲ್ಲಾಣದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ನಂತರ ಮಾತಾಡಿದ ಅವರು, ಸಚಿವರು ಇಲ್ಲಿಗೆ ಬಂದು ಉದ್ಘಾಟನೆ ಮಾಡಬೇಕೆಂದು ಕೇಳಿಕೊಂಡಿದ್ದೆ. ಅದರಂತೆ ಅವರಿಂದು ಬಂದಿದ್ದು ಸಂತೋಷವಾಗಿದೆ. ಅವರು ಸಿಬ್ಬಂದಿಗೆ ಭರವಸೆ ಮತ್ತು ಯೋಜನೆಗಳನ್ನು ಹೇಳಿದ್ದಾರಾದರೂ ಅವನ್ನು ಜಾರಿಗೆ ತರುವುದು ಸುಲಭವಲ್ಲ. ನಮ್ಮಲ್ಲಿ ಸಾಕಷ್ಟು ಬಸ್ಸು, ಸಿಬ್ಬಂದಿ ಕೊರತೆಯಿದೆ. ಮಕ್ಕಳು ಶಾಲೆಯಿಂದ ಮನೆಗೆ ಬರುವುದು, ಹೋಗುವುದು ಕಷ್ಟವಾಗಿದೆ. ನಮಗೆ ಹೊಸ ಬಸ್ ಗಳಿಲ್ಲ. ಹಳೆಯ ಬಸ್ ಗಳೇ ಓಡಾಡುತ್ತಿವೆ. ಅದಕ್ಕೆ ಕ್ರಮ ಕೈಗೊಳ್ಳಬೇಕೆಂದರು.
https://pragati.taskdun.com/mp-student-filed-case-against-youtube/