Kannada NewsLatest
ಶಾಸಕ ಪಿ.ರಾಜೀವ್ ತಾಯಿ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಡಚಿ ಶಾಸಕ, ತಾಂಡಾ ಅಭಿವೃದ್ದಿ ನಿಗಮದ ಚೇರಮನ್ ಪಿ.ರಾಜೀವ್ ಅವರ ತಾಯಿ ಶಾಂತಮ್ಮ ಪಾಂಡಪ್ಪ ಲಮಾಣಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಶಾಂತಮ್ಮ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ 13 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶಾಂತಮ್ಮ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕೊರೊನಾಗೆ ಬಲಿ




