Latest

ಜೈಲಿನಲ್ಲಿರುವ ಉಗ್ರರಿಂದ ವೀರ್ಯ ಕಳ್ಳಸಾಗಣೆ

ಪ್ರಗತಿವಾಹಿನಿ ಸುದ್ದಿ; ಇಸ್ರೇಲ್: ಪ್ಯಾಲಸ್ಟೈನ್ ನಲ್ಲಿ ವೀರ್ಯ ಕಳ್ಳಸಾಗಣೆ ಭರದಿಂದ ಸಾಗಿದ್ದು, ಇಸ್ರೇಲಿ ಜೈಲುಗಳಲ್ಲಿರುವ ಉಗ್ರರು ತಮ್ಮ ಪತ್ನಿಯರಿಗೆ ಸ್ಪರ್ಮ್ ನ್ನು ರಹಸ್ಯವಾಗಿ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

ಹೀಗೆ ವೀರ್ಯ ಸಾಗಣೆ ಮಾಡುವ ಮೂಲಕ ಉಗ್ರರು ತಮ್ಮ ಪತ್ನಿಯರು ಗರ್ಭಧಾ=ರಿಸುವಂತೆ ಮಾಡುತ್ತಿದ್ದು, ಉಗ್ರರ ಉತ್ತರಾಧಿಕಾರಿಗಳಿಗೆ ಜನ್ಮ ನೀಡುತ್ತಿದ್ದಾರೆ. ಸ್ಪರ್ಮ್ ಸ್ಮಗ್ಲಿಂಗ್ ನಿಷೇಧಿಸದಿದ್ದರೆ ಇಸ್ಲೇಲಿಗೆ ದೊಡ್ಡ ಬೆದರಿಕೆಯುಂತಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮಧ್ಯಪ್ರಾಚ್ಯ ತಜ್ನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Home add -Advt

ಇಸ್ರೇಲ್ ನಲ್ಲಿ ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿರುವ ಕೈದಿಗಳಿಗೆ ಶಾರೀರಿಕವಾಗಿ ಒಂದಾಗಲು ಅನುಮತಿ ನೀಡಲಾಗುವುದಿಲ್ಲ. ಪ್ಯಾಲಿಸ್ತೇನ್ ನ ಆಸ್ಪತ್ರೆಗಳಲ್ಲಿ ಇವರ ಪತ್ನಿಯರಿಗೆ ಪ್ರಸವ ಪ್ರಕ್ರಿಯೆ ನಡೆಸಲಾಗುತ್ತದೆ. ಜೈಲಿನಲ್ಲಿ ಭದ್ರತಾ ಸೋರಿಕೆ ಅಸಾಧ್ಯ. ಆದರೆ ಕೆಲವೊಮ್ಮೆ ಇಂತಹ ಪ್ರಯತ್ನ ಯಶಸ್ವಿಯಾಗುತ್ತಿದೆ. ಸಣ್ಣ ಡಬ್ಬಿಗಳಲ್ಲಿ ಉಗ್ರರು ಸ್ಪರ್ಮ್ ಕಲೆಕ್ಟ್ ಮಾಡಿ ತಮ್ಮ ಪತ್ನಿಯರಿಗೆ ತಲುಪವಂತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

2018ರ ವೇಳೆಗೆ 56 ಪ್ಯಾಲೆಸ್ಟೀನ್ ಉಗ್ರರ ಪತ್ನಿಯರು ಹೀಗೆ ವೀರ್ಯ ಕಳ್ಳಸಾಗಣೆ ಮೂಲಕವೇ ಗರ್ಭ ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button