
ಪ್ರಗತಿವಾಹಿನಿ ಸುದ್ದಿ: ಸಮುದ್ರಕ್ಕೆ ಇಳಿದಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಗೋಪಾಡಿ ಬೀಚ್ ನಲ್ಲಿ ನಡೆದಿದೆ.
ಬೆಂಗಳೂರಿನಿಂದ ಪ್ರವಾಸಕ್ಕೆಂದು ಹೋಗಿದ್ದ ಯುವಕರು ಸಮುದ್ರಕ್ಕೆ ಇಳಿದಿದ್ದರು. ಅವರಲ್ಲಿ ಮೂವರು ನೀರುಪಾಲಾಗಿದ್ದಾರೆ. ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದವರು ಸ್ಥಳಕ್ಕೆ ಧಾವಿಸಿ ಶೋಧಕಾರ್ಯಾಚರಣೆ ನಡೆಸಿದ್ದಾರೆ.