*ಕುರುಬ ಸಮುದಾಯ ಎಸ್ ಟಿ ಗೆ ಸೇರ್ಪಡೆ: ಸತೀಶ್ ಜಾರಕಿಹೊಳಿ ಹೇಳಿದ್ದೇನು..?*

ಪ್ರಗತಿವಾಹಿನಿ ಸುದ್ದಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುತ್ತೆ ಎಂದು ಪರಿಶಿಷ್ಟ ಮುದಾಯದಿಂದ ಈಗಾಗಲೇ ಎಲ್ಲಡೆ ಪ್ರತಿಭಟನೆ ಆರಂಭವಾಗುತಿದ್ದು, ಈ ವಿಚಾರವಾಗಿ ಸತೀಶ್ ಜಾರಿಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಸಾಕಷ್ಟು ಶಿಫಾರಸುಗಳು ಹೋಗಿವೆ. ಬುಡಕಟ್ಟಿಗೆ ಸೇರಿದ ಅಂಶಗಳು ಇದ್ದರೆ ಎಸ್ಟಿಗೆ ಸೇರುತ್ತದೆ ಸರ್ಕಾರ ಶಿಫಾರಸು ಮಾಡಿದ ತಕ್ಷಣ ಆಗುತ್ತದೆ ಅಂತ ಏನಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣವಾಗಿದ್ದು ಯಾರು ಸಹ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಎಸ್ ಟಿ ಗೆ ಹೊಸದಾಗಿ ಜಾತಿಗಳು ಸೇರ್ಪಡೆ ಆದರೆ ಎಸ್ ಟಿ ಮೀಸಲಾತಿ ಪ್ರಮಾಣ ಕೂಡ ಹೆಚ್ಚಳ ಆಗಬೇಕು. ಕೇಂದ್ರ ಸರ್ಕಾರ ಇದೆಲ್ಲವನ್ನು ಸುಮ್ಮನೆ ಮಾಡುವುದಿಲ್ಲ ಯಾವುದು ಸರಿಯಾಗಿದೆ ಅದನ್ನು ಮಾತ್ರ ಕೇಂದ್ರ ಸರ್ಕಾರ ಮಾಡುತ್ತದೆ ಎಂದರು.
ಇಂತಹ ಶಿಫಾರಸುಗಳು 20 ವರ್ಷಗಳಿಂದ ಬರುತ್ತಲೇ ಇವೆ. ಎಸ್ ಟಿ ಗೆ ಹೊಸ ಜಾತಿ ಸೇರಿಸುವುದು ಸುಲಭದ ಕೆಲಸ ಅಲ್ಲ. ಅನೇಕ ಶಿಫಾರಸುಗಳು ದೆಹಲಿ ಬೆಂಗಳೂರು ಅಂತ ಸುತ್ತುತ್ತಲೇ ಇವೆ. ತಳವಾರ ಪರಿವಾರ ಎರಡನೇ ಮಾತ್ರ ಎಸ್ ಟಿ ಗೆ ಸೇರಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣವಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ತಿಳಿಸಿದ್ದಾರೆ.