ಭಾರತೀಯ ಪ್ರಾಡಕ್ಟ್‌ಗಳನ್ನು ಬ್ಯಾನ್ ಮಾಡಿದ ಕುವೈತ್‌ನ ಸೂಪರ್ ಮಾರ್ಕೇಟ್‌ಗಳು

ಪ್ರಗತಿ ವಾಹಿನಿ ಸುದ್ದಿ ನವದೆಹಲಿ – 

ಬಿಜೆಪಿ ರಾಷ್ಟ್ರೀಯ ವಕ್ತಾರೆಯ ಪ್ರವಾದಿ ಮೊಹಮ್ಮದ್‌ರ ಕುರಿತಾದ ಅವಹೇಳನಕಾರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ಕುವೈತ್‌ನ ಸೂಪರ್ ಮಾರ್ಕೇಟ್‌ಗಳು ಸೋಮವಾರ ತಮ್ಮ ಮಳಿಗೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲಾ ಭಾರತೀಯ ಪ್ರಾಡೆಕ್ಟ್‌ಗಳ ಮಾರಾಟವನ್ನು ರದ್ದು ಮಾಡಿವೆ.

ನಾವು ಕುವೈತ್‌ನ ಮುಸ್ಲಿಮರು ಪ್ರವಾದಿ ಮೊಹಮ್ಮದ್‌ರ ಕುರಿತು ಅವಹೇಳನಕಾರಿ ಮಾತುಗಳನ್ನು ಸಹಿಸುವುದಿಲ್ಲ ಎಂದು ಕುವೈತ್ ಸೂಪರ್ ಮಾರ್ಕೇಟ್‌ನ ಸಿಇಒ ನಾಸರ್ ಅಲ್ ಮುತೈರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್ ಸಂಘಟನೆ ಸಹ ಬಿಜೆಪಿ ವಕ್ತಾರೆಯ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿದೆ.

ಅಲ್ಲದೆ ಇರಾನ್, ಕತಾರ್ ಮತ್ತು ಕುವೈತ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳುಪ್ರವಾದಿ ಮೊಹಮ್ಮದ್ ಕುರಿತಾದ ಬಿಜೆಪಿ ವಕ್ತಾರೆಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಸಮನ್ಸ್ ನೀಡಿದೆ.

Home add -Advt

ಇನ್ನೊಂದೆಡೆ ಬಿಜೆಪಿ ನೂಪುರ್ ಶರ್ಮಾ ಹೇಳಿಕೆಯಿಂದ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅವರನ್ನು ರಾಷ್ಟ್ರೀಯ ವಕ್ತಾರೆಯ ಸ್ಥಾನದಿಂದ ಉಚ್ಛಾಟಿಸಿದೆ.

ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾರನ್ನು ಪಕ್ಷದಿಂದ ಉಚ್ಛಾಟಿಸಿದ BJP

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button