Kannada NewsLatest

*ಪತ್ರಕರ್ತರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಪ್ರಯತ್ನ; ಕೆಯುಡಬ್ಲ್ಯೂಜೆಗೆ ಆಯುಕ್ತ ನಿಂಬಾಳ್ಕರ್ ಭರವಸೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಹೇಮಂತ ನಿಂಬಾಳ್ಕರ್ ಅವರನ್ನು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ (ಕೆಯುಡಬ್ಲ್ಯೂಜೆ )ದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಭೇಟಿ ಮಾಡಿ ಶುಭಕೋರಿದರು.

ಪತ್ರಕರ್ತರ ಮಾಸಾಶನ ಸಮಿತಿ ಸಭೆ ಮತ್ತು ಅಕ್ರಡೆಷನ್ ಕಮಿಟಿ ಸಭೆ ನಡೆದಿಲ್ಲ. ಜೊತೆಗೆ ಪತ್ರಕರ್ತರ ಹಲವು ಸಮಸ್ಯೆಗಳು ಹಾಗೆ ಉಳಿದಿವೆ ಎಂಬುದನ್ನು ತಗಡೂರು ಅವರು ಆಯುಕ್ತರ ಗಮನಕ್ಕೆ ತಂದರು.

ಆದಷ್ಟು ಬೇಗ ಪತ್ರಕರ್ತರ ಮಾಶಾಸನ ಹಾಗೂ ಮಾಧ್ಯಮ ಆರ್ಕಿಡೇಷನ್ ಕಮಿಟಿ ಸಭೆ ನಡೆಸುವುದಾಗಿ ಆಯುಕ್ತರು ಭರವಸೆ ನೀಡಿದರು
ರಾಜ್ಯಧ್ಯಕ್ಷರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಆಯುಕ್ತರು ಪತ್ರಕರ್ತರ ಯಾವುದೇ ಸಮಸ್ಯೆ ಇದ್ದರು ನನ್ನ ಗಮನಕ್ಕೆ ತಂದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ ಸದಾಕಾಲ ಪತ್ರಕರ್ತರ ಬೆನ್ನೆಲುಬಾಗಿ ಸರಕಾರ ಮತ್ತು ಪತ್ರಕರ್ತರ ನಡುವೆ ಸೇತುವೆಯಾಗಿ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದರು.

ಹಿರಿಯ ಪತ್ರಕರ್ತರಾದ ನಾಗಣ್ಣ, ಶಿವಕುಮಾರ್, ಯಾದಗಿರಿ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಕುಮಾರ ಸ್ವಾಮಿ ಇತರರು ಇದ್ದರು.

Home add -Advt

https://pragati.taskdun.com/dcm-d-k-shivakumarbangalorecity-rounds/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button