ಶಾಸಕ ಅಭಯ ಪಾಟೀಲ ಪ್ರಯತ್ನಕ್ಕೆ ಯಶಸ್ಸು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಬೆಳಗಾವಿಯಲ್ಲಿ ಆಮ್ಲಜನಕ ಕೊರತೆಯನ್ನು ಗಮನಿಸಿದ ಶಾಸಕ, ಅಭಯ ಪಾಟೀಲ ಆಮ್ಲಜನಕ ತಯಾರಿಕಾ ಘಟವನ್ನು ಸ್ಥಾಪಿಸುವಂತೆ ಎಲ್&ಟಿ ಕಂಪನಿಗೆ ವೈಯಕ್ತಿಕವಾಗಿ ವಿನಂತಿಸಿದ್ದರು.
ಅದಕ್ಕೆ ಸ್ಪಂದಿಸಿ, ಪ್ರತಿ ನಿಮಿಷಕ್ಕೆ 700 ಲಿಟರ್ ಅಂದರೆ (50 ರಿಂದ 60 ಹಾಸಿಗೆಗಳಿಗೆ 24 ಗಂಟೆಗಳ ಕಾಲ) ಆಮ್ಲಜನಕ ಪೂರೈಕೆ ಮಾಡುವಂತ ಘಟಕ ಸ್ಥಾಪನೆ ಮಾಡಿದ್ದಾರೆ. ಘಟಕ ಶನಿವಾರದಿಂದ ಕಾರ್ಯಾರಂಭ ಮಾಡಿತು.
ಕರ್ನಾಟಕದಲ್ಲಿ ಮೊದಲನೆಯ ಭಾರಿಗೆ ಸಿಎಸ್ಆರ್ ಅನುದಾನ ಉಪಯೋಗಿಸಿ, ಎಲ್&ಟಿ ಕಂಪನಿಯ ಆಮ್ಲಜನಕ ತಯಾರಿಕಾ ಘಟಕವನ್ನು ಬೆಳಗಾವಿಯಲ್ಲಿ ಸ್ಥಾಪಿಸಿದೆ.
ಕಾಮಗಾರಿ ಶಂಖುಸ್ಥಾಪನೆ ಮಾಡಿ 25 ದಿನಗಳಲ್ಲಿ ಆಮ್ಲಜನಕ ತಯಾರಿಕಾ ಘಟಕ ಕಾರ್ಯಾರಂಭ ಮಾಡಿದೆ.
ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ