ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳಾ ಕಾನ್ಸ್ ಟೇಬಲ್ ಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಬಂಧಿತ ಆರೋಪಿ. ಮಹಿಳಾ ಕಾನ್ಸ್ ಟೇಬಲ್ ಸಹಪಾಠಿಯಾಗಿದ್ದ ಸತೀಶ್ ಪದೇ ಪದೇ ಕರೆ ಮಾಡಿ ಕಿರಿ ಕಿರಿ ಮಾಡುತ್ತಿದ್ದ. ಇದರಿಂದ ಬೇಸತ್ತ ಮಹಿಳಾ ಕಾನ್ಸ್ ಟೇಬಲ್ ತನ್ನ ಸ್ನೇಹಿತರ ಗ್ರೂಪ್ ನಿಂದ ಸತೀಶ್ ನನ್ನು ತೆಗೆದು ಹಾಕಿದ್ದರು.
ಇದರಿಂದ ಕೋಪಗೊಂಡ ಸತೀಶ್, ಮಹಿಳಾ ಕಾನ್ಸ್ ಟೇಬಲ್ ಮೊಬೈಲ್ ನಂಬರ್ ನ್ನು ಕಡೂರು ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯದ ಗೋಡೆಗೆ ಬರೆದಿದ್ದ. ಇದರಿಂದ ಮಹಿಳಾ ಕಾನ್ಸ್ ಟೇಬಲ್ ಗೆ ಅಶ್ಲೀಲ ಕರೆಗಳು ಬರಲಾರಂಭಿಸಿದ್ದವು. ಈ ಬಗ್ಗೆ ಮಹಿಳಾ ಕಾನ್ಸ್ ಟೇಬಲ್ ದೂರು ನೀಡಿದಾಗ ಪೊಲೀಸರು ತನಿಖೆ ಕೈಗೊಂಡಿದ್ದರು. ಸದ್ಯ ಆರೋಪಿ ಸತೀಶ್ ಸಿಕ್ಕಿಬಿದ್ದಿದ್ದು, ಶೌಚಾಲಯದ ಗೋಡೆಗೆ ನಂಬರ್ ಬರೆದಿದ್ದು ಸತೀಶ್ ಎಂಬುದು ಗೊತ್ತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ