ಪ್ರಗತಿವಾಹಿನಿ ಸುದ್ದಿ; ಪುಣೆ: ಅನಧೀಕೃತವಾಗಿ ಗರ್ಭಪಾತ ಮಾತ್ರೆಗಳನ್ನು ನೀಡುತ್ತಿದ್ದ ಆರೋಪದಲ್ಲಿ ವೈದ್ಯೆಯೊಬ್ಬಳನ್ನು ಪುಣೆಯ ಪಿಂಪ್ರಿ-ಚಿಂಚನವಾಡಿ ಪೊಲೀಸರು ಬಂಧಿಸಿದ್ದಾರೆ.
ವೈದ್ಯೆ ಕ್ಲಿನಕ್ ಒಂದನ್ನು ನಡೆಸುತ್ತಿದ್ದು ಕ್ಲಿನಿಕ್‍ನಲ್ಲಿ ಗೈನಕಾಲಜಿ, ಅಥವಾ ಗರ್ಭಪಾತ ಮಾತ್ರೆಗಳನ್ನು ವಿತರಿಸುವ ಅನುಮತಿ ನೀಡಿರಲಿಲ್ಲ. ಆದಾಗ್ಯೂ ವೈದ್ಯೆ ಅನಧೀಕೃತವಾಗಿ ಗರ್ಭಪಾತ ಮಾತ್ರೆ ವಿತರಿಸುತ್ತಿದ್ದಳು ಮತ್ತು ಔಷಧ ಚೀಟಿಯಲ್ಲೂ ಗರ್ಭಪಾತ ಮಾತ್ರೆ ಬರೆದುಕೊಡುತ್ತಿದ್ದಳು.
ಈ ಕುರಿತು ಪಿಂಪ್ರಿ ಚಿಂಚನವಾಡಿ ಮುನ್ಸಿಪಲ್ ಕೌನ್ಸಿಲ್‍ನ ವೈದ್ಯಾಧಿಕಾರಿ ಪವನ್ ಸಾಳ್ವೆ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ವೈದಯೆಯನ್ನು ಬಂಧಿಸಿದ್ದಾರೆ.
ಮಾಲಕನ ತಾಯಿಯನ್ನೇ ಕೊಂದ ಯುವಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ