ಯುನೈಟೆಡ್ ಕಿಂಗ್ಡಂ – ಜಗತ್ತಿನಲ್ಲಿ ನಾನಾ ಅಚ್ಚರಿಯ ವಿಷಯಗಳು ಘಟಿಸುತ್ತಲೇ ಇರುತ್ತವೆ. ಸಾಮಾನ್ಯವಾಗಿ ಮಹಿಳೆಯೊಬ್ಬಳು ಗರ್ಭ ಧರಿಸಿದ ಬಳಿಕ ಒಂಬತ್ತು ತಿಂಗಳು ಮಗು ಗರ್ಭದಲ್ಲಿ ಬೆಳೆದು ಜನ್ಮ ತಳೆಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಒಂದೇ ವರ್ಷದಲ್ಲಿ ಎರಡು ಬಾರಿ ಗರ್ಭ ಧರಿಸಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ !
ಹೌದು. ಯುನೈಟೆಡ್ ಕಿಂಗ್ಡಂನ ಕಾರೋಲಿನ್ ಡಾರ್ಟ್‌ಮನ್ ಎಂಬ ೩೦ ವರ್ಷದ ಮಹಿಳೆ ಇಂಥಹ ಅಚ್ಚರಿಯೊಂದಕ್ಕೆ ಕಾರಣರಾಗಿದ್ದಾರೆ.
ಹೇಗೆ ಸಾಧ್ಯ ?
ಕಾರೋಲಿನ್ ಅವರಿಗೆ ಎರಡು ಪ್ರತ್ಯೇಕ ಗರ್ಭ ಕೋಶವೇ ಇರುವುದು ಇಂಥಹ ಅಚ್ಚರಿಯ ವಿದ್ಯಮಾನಕ್ಕೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕಾರೋಲಿನ್ ಗರ್ಭಿಣಿಯಾಗಿ ಆರು ತಿಂಗಳ ಬಳಿಕ ವೈದ್ಯರ ಬಳಿ ತಪಾಸಣೆಗೆ ಹೋದಾಗ ಮತ್ತೊಂದು ಗರ್ಭ ಧಾರಣೆಯಾಗಿರುವುದು ಪತ್ತೆಯಾಗಿದೆ. ಈ ಮಕ್ಕಳು ಪರಸ್ಪರ ಆರು ತಿಂಗಳ ಅಂತರದಲ್ಲಿ ಜನ್ಮ ನೀಡಿದ್ದು ಇಬ್ಬರು ಮಕ್ಕಳೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಮಕ್ಕಳಾಗಲ್ಲ ಎಂದಿದ್ದರು.
ಕಾರೋಲಿನ್ ವಿವಾಹವಾಗಿ ಕೆಲ ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ತಪಾಸಣೆ ನಡೆಸಿದ ವೈದ್ಯರೂ ಸಹ ನಿಮಗೆ ಮಕ್ಕಳು ಜನಿಸುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರಂತೆ. ಕಾರೋಲಿನ್ ಸಹ ತನಗೆ ಮಕ್ಕಳಾಗುವುದಿಲ್ಲ ಎಂದು ನಂಬಿದ್ದರು. ಆದರೆ ಅದಾದ ೧೦ ವರ್ಷದ ಬಳಿಕ ಎರಡು ಪ್ರತ್ಯೇಕ ಗರ್ಭ ಕೋಶಗಳ ಮೂಲಕ ಒಂದೇ ವರ್ಷದಲ್ಲಿ ಎರಡು ಮಕ್ಕಳ ಜನ್ಮಕ್ಕೆ ಕಾರಣರಾಗಿ ಅಚ್ಚರಿ ಮೂಡಿಸಿದ್ದಾರೆ.
ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ: ಆಪ್ ಸಿಎಂ ಅಭ್ಯರ್ಥಿ ಘೋಷಣೆ, CM ಪ್ರಮಾಣವಚನ ಸ್ಥಳ ಎಲ್ಲಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ