
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು 25 ವರ್ಷಗಳ ಬೇಡಿಕೆಯಾಗಿದ್ದ ಹಿರೇಬಾಗೇವಾಡಿಯ ಗುಳ್ಳವನ ಕೆರೆಯ ಅಭಿವೃದ್ಧಿಯ ಕಾಮಗಾರಿಗಳು ಅಂದಾಜು 2 ಕೋಟಿ ರೂ ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಪರಿಶೀಲನೆ ನಡೆಸಿದರು.

ಈ ಕೆರೆಯು ವಾಕಿಂಗ್ ಟ್ರ್ಯಾಕ್, ಸುತ್ತಮುತ್ತ ದೀಪಗಳ ಅಳವಡಿಕೆ, ಸಾರ್ವಜನಿಕ ಆಸನಗಳ ವ್ಯವಸ್ಥೆ, ಬಟ್ಟೆ ಹಾಗೂ ವಾಹನಗಳನ್ನು ತೊಳೆಯಲು ಮತ್ತು ಗಣೇಶ ವಿಸರ್ಜನೆಗೆ ಪ್ರತ್ಯೇಕ ಭಾಗಗಳಾಗಿ ವಿಂಗಡಿಸಲಾಗಿದೆ.
ಕೆರೆಯ ಅಭಿವೃದ್ಧಿಗೆ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದ್ದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ