
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಲಿತಾಂಶಕ್ಕೂ ಮುನ್ನವೇ ಆಪರೇಷನ್ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಎಂಎಲ್ ಸಿ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಲಖನ್ ಜಾರಕಿಹೊಳಿ, ಗೋವಾದಲ್ಲಿ ಹೇಗೆ ಆಯ್ತೋ ಹಾಗೇ ಇಲ್ಲಿಯೂ ಆಗುತ್ತೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟು ಬರ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಸಂಪೂರ್ಣ ಬಹುಮತ ಬರದಿದ್ದರೆ ಆಪರೆಷನ್ ಕಮಲ ಆಗುತ್ತೆ ಎಂದು ಸುಳಿವು ನೀಡಿದ್ದಾರೆ. ಒಂದು ಲೆಕ್ಕದ ಪ್ರಕಾರ 120 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. 85 ಸ್ಥಾನಗಳು ಕಾಂಗ್ರೆಸ್ ಗೆ ಸಿಗಲಿದೆ. ಅದರಲ್ಲಿ 20 ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟುಬರ್ತಾರೆ. ಅಧಿಕಾರಕ್ಕೆ ಬರದಿದ್ದರೆ ಏನ್ ಮಾಡ್ತಾರೆ ರಾಜೀನಾಮೆ ಕೊಟ್ಟು ಬರಲೇಬೆಕು. ಗೋವಾದಲ್ಲಿ ಆದಂತೆ ಇಲ್ಲಿಯೂ ಆಗಲಿದೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ