
*ಇಂತಹ ಪ್ರತಿಭಟನೆಯನ್ನು ಬಹಳ ನೋಡಿದ್ದೇನೆ, ಯಾವ ಅಧಿಕಾರಿಯೂ ಯಾರ ಕೈಗೊಂಬೆ ಅಲ್ಲ; ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ ಸವದಿ ಪರೋಕ್ಷ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಥಣಿ ಕ್ಷೇತ್ರಕ್ಕೆ ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಡಿಸಿಎಂ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪರೋಕ್ಷ ಕಿಡಿಕಾರಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ಶಾಸಕರು, ಬೇರೆ ತಾಲೂಕಿನಿಂದ ಇಲ್ಲಿಗೆ ಬಂದು ನಟನೆ ಮಾಡುವುದು ಕಂಡಿದ್ದೇನೆ. ಯಾವ ಚಿಲ್ಲರೆ ಮಾತುಗಳ ಬಗ್ಗೆ ಬೆಲೆ ಕೊಡಲ್ಲ. ಗಮನ ಹರಿಸಲ್ಲ ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಅಥಣಿ ಕ್ಷೇತ್ರಕ್ಕೆ ಬಂದಿದ್ದ ರಮೇಶ್ ಜಾರಕಿಹೊಳಿ ಅಥಣಿಯಿಂದಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಲಕ್ಷ್ಮಣ ಸವದಿ, ಇಂತಹ ಪ್ರತಿಭಟನೆಯನ್ನು ಬಹಳ ನೋಡಿದ್ದೇನೆ. ಯಾವ ಅಧಿಕಾರಿಯೂ ಯಾರ ಕೈಗೊಂಬೆಗಳಲ್ಲ. ಸಂವಿಧಾನದ ಅಡಿ ಕೆಲಸ ಮಾಡಬೇಕಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ.