Election NewsKannada NewsKarnataka NewsPolitics

*ನಮಗೂ ದೇಶಾಭಿಮಾನವಿದೆ; ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ; ಬಿಜೆಪಿ ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ನಾಳೆ ಬಿಜೆಪಿ ನಾಮಿನೇಶನ್ ಮಾಡೋಕ್ಕೆ  ಯಡಿಯೂರಪ್ಪನವರು ಬರುವಾಗ ನರೇಂದ್ರ ಮೋದಿಯವರಿಗೆ ಯಾಕೆ ಓಟ್ ಹಾಕಬೇಕೆಂದು   ಕೇಳಿ. ದೇಶದ ರಕ್ಷಣೆಗೆ, ದೇಶಾಭಿಮಾನಕ್ಕೆ ಓಟ್ ಹಾಕಬೇಕು ಎಂದು ಹೇಳುತ್ತಾರೆ. ನಾವು ಇಲ್ಲಿ ಕುಂತವರು ದೇಶಭಕ್ತರು ಹೌದೋ ಅಲ್ವೋ ? ಇವರೆಲ್ಲ ಯಾವಾಗ ಹುಟ್ಟಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ.‌ ಇಲ್ಲಿ ಸೇರಿದವರು ಜೋರಾಗಿ ಭಾರತ್ ಮಾತಾಕಿ ಜೈ ಅನ್ನಬೇಕು ಎಂದು ಲಕ್ಷ್ಮಣ ಸವದಿ ಘೋಷಣೆ ಕೂಗಿಸಿದ್ದಾರೆ.‌

Related Articles

ಕೊಪ್ಪಳದ ಬಹಿರಂಗ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಭಾರತ ಮಾತಾಕಿ ಜೈ ಬಿಜೆಪಿಯವರೇನು ಗುತ್ತಿಗೆ ತಗೊಂಡಿದ್ದಾರೆಯೇ. ನಮಗೂ ದೇಶಾಭಿಮಾನ ಇದೆ, ಈ ವಿಡಿಯೋ ಕ್ಲೀಪ್ ನ ಮೋದಿಯವರಿಗೆ ಕಳುಹಿಸಿ, ನಾನು 25 ವರ್ಷ ಬಿಜೆಪಿಯಲ್ಲಿದ್ದೆ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸು ಮಾಡಲು ಮೋದಿ ಪ್ರಧಾನಿ ಆಗಬೇಕು ಅಂತ ಹೇಳಿದರು.‌ ನದಿ ಜೋಡಣೆ ಮಾಡೋ ಯೋಜನೆ ಮಾಡುತ್ತೇವೆ ಅಂತ ಹೇಳಿದರು.‌ ರೂಪಾಯಿ ಮೌಲ್ಯ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದರು. ಬುಲೆಟ್, ಟ್ರೈನ್ ಶುರು ಮಾಡುತ್ತೇವೆ ಎಂದು ಹೇಳಿದರು.‌ ಇದನ್ನೆಲ್ಲಾ ಕೇಳಿ ದೇಶದ ಜನ ಅವರಿಗೆ ಮತ ಹಾಕಿದ್ದಾರೆ.‌ ಆದರೆ ಇವರು ಹೇಳಿದ್ದು ಯಾವುದು ಆಗಿಲ್ಲ.‌ ಇವತ್ತಿನ ಪ್ರಣಾಳಿಕೆಯಲ್ಲಿ ಬುಲೆಟ್ ಟ್ರೈನ್ ಮತ್ತೆ ಬಿಡುತ್ತೇವೆ ಅಂತ ಹೇಳಿದ್ದಾರೆ. ಇವರು ಬುಲೆಟ್ ಟ್ರೈನ್ ಬಿಡೋದು ಇಲ್ಲ, ಮತ್ತೆ ಅಧಿಕಾರಕ್ಕೂ ಬರಲ್ಲ ಎಂದು ತಿಳಿಸಿದರು. 

ಬಿಜೆಪಿ ಅಭ್ಯರ್ಥಿ ಹಾಸ್ಪಿಟಲ್ ಇಷ್ಟು ದೊಡ್ಡದಾಗೋಕೆ ಕಾರಣ ಕೊರೊನಾ. ಕೊರೊನಾದಲ್ಲಿ ಜನರನ್ನು ಸುಲಿಗೆ ಮಾಡಿರೋ ದುಡ್ಡಲ್ಲಿ ಇಷ್ಟು ದೊಡ್ಡ ಹಾಸ್ಪಿಟಲ್‌ ಆಗಿದೆ. ಜನರನ್ನು ರಕ್ಷಣೆ ಮಾಡೋರು ಬೇಕೊ ಸುಲಿಗೆ ಮಾಡೋರು ಬೇಕೊ ಯೋಚನೆ ಮಾಡಿ ಎಂದು ಕೊಪ್ಪಳ ಬಹಿರಂಗ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.‌

Home add -Advt

Related Articles

Back to top button