Kannada NewsLatestUncategorized

*ಹಿಂದಿನ ವಿಚಾರ ಮೆಲುಕು ಹಾಕಿ ಬೇರೆಯವರನ್ನು ಟೀಕಿಸಲಿ; BSYಗೆ ಟಾಂಗ್ ನೀಡಿದ ಲಕ್ಷ್ಮಣ ಸವದಿ*

ಪ್ರಗತಿವಾಹಿನಿ ಸುದ್ದಿ; ಅಥಣಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೇರೆಯವರನ್ನು ಟೀಕಿಸುವ ಮೊದಲು ಸ್ವಲ್ಪ ತಮ್ಮ ಹಿಂದಿನ ವಿಚಾರ ಮೆಲುಕು ಹಾಕಲಿ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಟಾಂಗ್ ನೀಡಿದ್ದಾರೆ.

ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದರೂ ಅವರು ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷ ಕಟ್ಟಿದ್ದರು. ಬೇರೆಯವರನ್ನು ಟೀಕಿಸುವ ಮೊದಲು ಸ್ವಲ್ಪ ತಮ್ಮ ವಿಚಾರವನ್ನು ಮೆಲುಕು ಹಾಕಲಿ. ಆಸಂದರ್ಭದಲ್ಲಿ ಬಿಜೆಪಿಯನ್ನು ಮುಳುಗಿಸಿದ ಕೀರ್ತಿ ಯಡಿಯೂರಪ್ಪನವರಿಗೂ ಸಲ್ಲುತ್ತದೆ ಎಂದರು.

Home add -Advt

ಯಡಿಯೂರಪ್ಪನವರು ಅತ್ಯಂತ ಗೌರವಾನ್ವಿತರು. ಅವರ ಬಗ್ಗೆ ನಾನು ಹೆಚ್ಚು ಹೇಳಲು ಹೋಗಲ್ಲ. ಆದರೆ ನನ್ನ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧ ಮಾತನಾಡುವ ಹಕ್ಕು ಯಡಿಯೂರಪ್ಪನವರಿಗಿಲ್ಲ. ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದರಲ್ಲಿ ನಮ್ಮ ಪಾತ್ರವಿದೆ ಎಂದು ಗರಂ ಆದರು.

ರಾಜ್ಯದಲ್ಲಿ 125 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

https://pragati.taskdun.com/b-s-yedyurappapressmeetjagadish-shettarlakshmana-savadi/

Related Articles

Back to top button