Latest

ಸಾರಿಗೆ ಮುಷ್ಕರ; ಯೂನಿಯನ್ ಮುಖಂಡರು-ಸಾರಿಗೆ ಸಚಿವರ ಸಭೆ ಅರ್ಧಕ್ಕೆ ಮೊಟಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾರಿಗೆ ನೌಕರರು ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಸಿಬ್ಬಂದಿಗಳ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದೆ.

ಈ ನಡುವೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಳೆದ ಮೂರು ದಿನಗಳಿಂದ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಎಲ್ಲಾ ಸಭೆಗಳು ವಿಫಲವಾಗಿವೆ. ಮುಷ್ಕರಕ್ಕೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿರುವವರನ್ನು ಬಿಟ್ಟು ಸಾರಿಗೆ ಸಚಿವರು ಮುಷ್ಕರದಲ್ಲಿ ಭಾಗಿಯೇ ಆಗದವರ ಜೊತೆ ಸಭೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆಯುವಂತೆ ಮನವೊಲಿಸಲು ಸಾರಿಗೆ ಟ್ರೇಡ್ ಯೂನಿಯನ್ ಮುಖಂಡರ ಜೊತೆ ಸಚಿವ ಸವದಿ ಸಭೆ ಕರೆದಿದ್ದರು. ಆದರೆ ಇದೀಗ ಆಸಭೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಯೂನಿಯನ್ ಮುಖಂಡರು, ಸಾರಿಗೆ ನೌಕರರ ಮುಷ್ಕರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ, ಯಾರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೋ ಅವರನ್ನು ಕರೆದು ಚರ್ಚಿಸಿ. ನಾವು ಮುಷ್ಕರಕ್ಕೆ ಕರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಸಾರಿಗೆ ಸಚಿವರು ಸಭೆ ಅರ್ಧಕ್ಕೆ ನಿಲ್ಲಿಸಿ, ಎದ್ದು ನಡೆದಿದ್ದಾರೆ ಎನ್ನಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button