Kannada NewsKarnataka News

ಸ್ಮಾರ್ಟ್ ಶಿಕ್ಷಣದತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಲಕ್ಷ್ಯ: ಮೊದಲ ಹಂತದಲ್ಲಿ 20 ಸ್ಮಾರ್ಟ್ ಕೊಠಡಿ ನಿರ್ಮಾಣ

ಸೋಮವಾರ ಉಚಗಾಂವ ಹಾಗೂ ಬಿಜಗರಣಿ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟಸಿ ಅವರು ಮಾತನಾಡುತ್ತಿದ್ದರು. ನಾನು ಶಾಸಕಿಯಾದ ನಂತರ ಮೊದಲ ಬಾರಿಗೆ ದೆಹಲಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ಸರಕಾರಿ ಶಾಲೆಗಳನ್ನು ಗಮನಿಸಿ ನಮ್ಮ ಕ್ಷೇತ್ರದಲ್ಲೂ ಅದೇ ಮಾದರಿಯ ಕ್ಲಾಸ್ ರೂಂ ಮಾಡಬೇಕೆನ್ನುವ ಕನಸು ಹೊತ್ತು ಬಂದೆ. ಸಿಎಸ್ಆರ್ ಫಂಡ್ ತಂದು ಇದೀಗ 20 ಶಾಲೆಗಳ ಕೊಠಡಿಗಳನ್ನು ಸ್ಮಾರ್ಟ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಶಾಲೆಯನ್ನೂ ಸ್ಮಾರ್ಟ್ ಆಗಿ ಪರಿವರ್ತಿಸಲಾಗುವುದು ಎಂದು ಅವರು ತಿಳಿಸಿದರು.
​ ಶಿಕ್ಷಣವಿದ್ದರಷ್ಟೆ ಜನರ ಅಭಿವೃದ್ಧಿ, ಕ್ಷೇತ್ರದ ಅಭಿವೃದ್ಧಿ. ಜೊತೆಗೆ ಗುಣಮಟ್ಟದ ಶಿಕ್ಷಣ ಇಂದಿನ ಮಕ್ಕಳಿಗೆ ಅಗತ್ಯ. ನಾವು ಕಲಿಯುವಾಗ ಈ ಅವಕಾಶ ಸಿಗಲಿಲ್ಲ. ಆದರೆ ನಮ್ಮ ಮಕ್ಕಳನ್ನು ಇದರಿಂದ ವಂಚಿತಗೊಳಿಸಬಾರದು ಎನ್ನುವುದು ನನ್ನ ಉದ್ದೇಶ ಎಂದು ಹೆಬ್ಬಾಳಕರ್ ಹೇಳಿದರು.
 
 ಬೆಳಗಾವಿ ಗ್ರಾಮೀಣ​ ಕ್ಷೇತ್ರದಲ್ಲಿ  ಸುಮಾರು 400ಕ್ಕೂ ಹೆಚ್ಚು ಎಲ್ಲ ಭಾಷೆ ಹಿರಿಯ ಪ್ರಾಥಮಿಕ ಶಾಲಾ ಕ್ಲಾಸ್ ರೂಮ್ ಗಳು ನಿರ್ಮಾಣವಾಗಿದ್ದು, ಅವುಗಳ ಪೈಕಿ ಈಗಾಗಲೇ ​20 ಕ್ಲಾಸ್ ರೂಮ್ ಗಳನ್ನು ಸ್ಮಾರ್ಟ್ ಕ್ಲಾಸ್ ರೂಮ್ ಗಳನ್ನಾಗಿ ಪರಿವರ್ತಿಸಲಾಗಿದೆ. ಈ ​20 ಸ್ಮಾರ್ಟ್ ಕ್ಲಾಸ್ ಗಳ ಪೈಕಿ ​​ಉಚಗಾಂವ ಹಾಗೂ ಬಿಜಗರಣಿ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳ ಸ್ಮಾರ್ಟ್ ಕ್ಲಾಸ್ ರೂಮ್​ ಗಳನ್ನು​ ಉದ್ಘಾಟಸಲಾಯಿತು. ಬೆಳಗಾವಿ ಗ್ರಾಮೀಣ ಕ್ಷೇತ್ರದ​ ಇತಿಹಾಸದಲ್ಲೇ  ಮೊಟ್ಟಮೊದಲ ಬಾರಿಗೆ ಸ್ಮಾರ್ಟ್ ಕ್ಲಾಸ್ ಗಳು ನಿರ್ಮಾಣ​ಗೊಂಡಿವೆ.​
ಈ ಸಂದರ್ಭದಲ್ಲಿ ಗ್ರಾಮಗಳ ಹಿರಿಯರು, ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ,​ ಕ್ಷೇತ್ರ ಶಿಕ್ಷಣಾಧಿಕಾರಿ ಜುಟ್ನವರ್,​ ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮ ಪಂಚಾಯತಿಯ ಸದಸ್ಯರು, ಮನೋಹರ್ ಬೆಳಗಾಂವ್ಕರ್, ಯಲ್ಲಪ್ಪ ಬೆಳ​ಗಾಂ​ವ್ಕರ್ ಹಾಗೂ ಶಾಲಾ ಸಿಬ್ಬಂದಿ​ ಉಪಸ್ಥಿತರಿದ್ದರು.​
​ 
– ಸ್ಮಾರ್ಟ್ ಕ್ಲಾಸ್ ಗಳ ವಿವರಗಳು ಈ ಕೆಳಕಂಡಂತಿವೆ.
√  ಸ್ಮಾರ್ಟ್ ಬೋರ್ಡ್
√  ಪ್ರೊಜೆಕ್ಟರ್
√ LED  ಟ್ಯೂಬ್ ಲೈಟ್
√ ಸ್ಮಾರ್ಟ್ ಡೆಸ್ಕ್
√ ಕ್ಯಾಬಿನೇಟ್
√ ಪೊಡಿಯಮ್ (ಡಯಾಸ್)
√ ವೆಟರಿಪೈಡ್ ಟೈಲ್ಸ್
√  ಎಸಿ (​​Air Conditioner 1 ton)
√  7 ಇಂಚಿನ 05 ಸ್ಮಾರ್ಟ್ ಟ್ಯಾಬ್ಲೆಟ್ (4GB, 32 GB)
√ ವಿಂಡೋ ಕರ್ಟನ್ಸ್ ಮತ್ತು ಬ್ರಾಕೇಟ್ಸ್
√  ಪ್ಲೈವುಡ್ ಡೋರ್ಸ್
√ ಪ್ರಿಂಟರ್
√  ನೇಮ್ ಪ್ಲೇಟ್
√ ಪ್ಯಾನ್ ಗಳು
√ ಸ್ಪೀಕರ್ಸ್
√ ಪೇಂಟಿಂಗ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button