ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮೀಣ ಕ್ಷೇತ್ರದಲ್ಲಿ ಕೊರೋನಾ ವಿರುದ್ಧ ಜನಜಾಗೃತಿ ಅಭಿಯಾನ, ಔಷಧ ಸಿಂಪರಣೆ ಮತ್ತು ಮಾಸ್ಕ್ ವಿತರಣೆ ಕಾರ್ಯವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರವೂ ಮುಂದುವರಿಸಿದ್ದಾರೆ.
ಕ್ಷೇತ್ರದ ತುರಮರಿ, ಬಾಚಿ ಹಾಗೂ ಕುದ್ರೆಮನಿ ಗ್ರಾಮಗಳಲ್ಲಿ ಬುಧವಾರ ಕೊರೊನಾ (COVID19) ವೈರಸ್ ಬಗ್ಗೆ ಜನಜಾಗೃತಿ ಅಭಿಯಾನವನ್ನು ಕೈಗೊಂಡರು. ಕೊರೋನಾ ಬರದಂತೆ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಿದ ಹೆಬ್ಬಾಳಕರ್, ತೀರಾ ಅನಿವಾರ್ಯವಲ್ಲದ ಹೊರತು ಮನೆಯಿಂದ ಹೊರಗೆ ಬರಬೇಡಿ ಎಂದು ಸೂಚಿಸಿದರು.
ಮನೆ ಬಾಗಿಲಿಗೆ ಅಗತ್ಯ ವಸ್ತು, ತರಕಾರಿಗಳ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆೆ. ನಿಮ್ಮ ಕಷ್ಟ, ಸುಖ ತಿಳಿಯಲು ನಾನೇ ನಿಮ್ಮಲ್ಲಿಗೆ ಬರುತ್ತಿದ್ದೇನೆ. ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಲಾಕ್ ಡೌನ್ ಮುಗಿದ ನಂತರ ನಿಮ್ಮ ನಿಮ್ಮ ಕೆಲಸಗಳನ್ನು ಮುಂದುವರಿಸಬಹುದು. ಅಲ್ಲಿಯವರೆಗೂ ಮನೆಯ ಜನರೊಂದಿಗೆ ಸಮಯ ಕಳೆಯಿರಿ ಎಂದು ವಿನಂತಿಸಿದರು.
ಇದೇ ವೇಳೆ, ಗ್ರಾಮಗಳಲ್ಲಿ ಕೆಮಿಕಲ್ ಭರಿತ ಔಷಧವನ್ನು ಸಿಂಪರಣೆ ಮಾಡಲಾಯಿತು. ಅಲ್ಲದೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಜನರಿಗೆ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ