Kannada NewsKarnataka NewsLatest
3.32 ಕೋಟಿ ರೂ. ವೆಚ್ಚದಲ್ಲಿ 2 ಕೆರೆ ಅಭಿವೃದ್ಧಿಗೆ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 3.32 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ 2 ಕೆರೆಗಳ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಪೂಜೆ ನೆರವೇರಿಸಿದರು.
ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದ ಶಾಹು ನಗರದ ಹತ್ತಿರವಿರುವ ಕೆರೆ ಅಭಿವೃದ್ಧಿ ಹಾಗೂ ಸೌಂದರ್ಯಿಕರಣದ ಕಾಮಗಾರಿಗಳಿಗೆ 110 ಲಕ್ಷ ರೂ. ಮಂಜೂರಾಗಿದೆ. ಕಾಮಗಾರಿಗೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಹಿರಿಯರು,
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದತ್ತಾ ರಾಮ್ ಪಾಟೀಲ, ಜಯರಾಮ್ ಪಾಟೀಲ, ಅನಿಲ್ ಪವಾಶೆ, ಬಂದೇನವಾಜ್ ಸೈಯದ್ ಆಯುಬ್ ಪಠಾಣ್, ರೇಖಾ ಇಂಡಿಕರ ವೇದಿಕ, ಪಠಾಣ್ ಪೂನಮ್ ಪಾಟೀಲ, ಸಂಧ್ಯಾ ಚೌಗಲೆ, ಮೇನಕಾ ಸುಜಾತಾ ಜಠಾರ, ಅಡಿವೆಪ್ಪ, ಅಭಿಜಿತ್ ಪುಟಾಣಿ, ಇನಾಮದಾರ್, ರಮ್ಜಾನ್ ಮನಿಯಾರ್ ಗ್ರಾಮದ ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದ ಕೆರೆ ಅಭಿವೃದ್ಧಿ ಹಾಗೂ ಸೌಂದರ್ಯಿಕರಣದ ಕಾಮಗಾರಿಗೆ 222 ಲಕ್ಷ ರೂ ಮಂಜೂರಾಗಿದೆ. ಈ ಕಾಮಗಾರಿಗೆ ಸಹ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಮುಂಜಾನೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯ ನಿವಾಸಿಗಳು, ಬಂಡೆನವಾಜ್ ಸಯ್ಯದ್, ಕೌಸರ್ ಸಯ್ಯದ್, ಶಮೀಮ್ ಪಠಾಣ್, ಅಯುಬ್ ಖಾನ್ ಪಠಾಣ್, ಆನಂದ ಕಮ್ಮಾರ, ಸಿದ್ದರಾಯಿ ಬೆಳಗಾವಿ, ಜಯರಾಮ್ ಪಾಟೀಲ, ಅನಿಲ ಪಾವಸೆ, ರಮ್ಜಾನ್, ರಫಿಕ್ ಗಾಡಿವಾಲೆ, ಷರೀಫ್, ಸಂದಿಸಾಬ್, ಜಮೀಲ್ ಕೊತವಾಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ