ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಯೋಗದ ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ಸೇರ್ಪಡೆಗೊಂಡಾಗ ಇಡೀ ಬೆಳಗಾವಿ ಕುಣಿದಾಡಿತು. ಬೆಳಗಾವಿ ನಗರ ಸುಂದರವಾಗಿ ಕಂಗೊಳಿಸಲಿದೆ ಎನ್ನುವ ನಿರೀಕ್ಷೆಯಲ್ಲಿ ಎಲ್ಲರೂ ಸಂಭ್ರಮಿಸಿದರು.
ಆದರೆ ಈ ಸಂಭ್ರಮ ಬೆಳಗಾವಿ ನಗರ ಬಿಟ್ಟು ಹೊರಗೆ ಹೋಗಿರಲಿಲ್ಲ. ಏಕೆಂದರೆ ಸ್ಮಾರ್ಟ್ ಸಿಟಿ ಯೋಜನೆ ಕೇವಲ ನಗರಕ್ಕೆ ಸೀಮಿತವಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಬೇಕಾದ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್ಮೆಂಟ್) ಪ್ರದೇಶ ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಸೀಮಿತವಾಗಿತ್ತು.
2018ರ ವಿಧಾನಸಭೆ ಚುನಾವಣೆ ನಂತರ ಈ ಚಿತ್ರಣ ಮತ್ತು ಯೋಜನೆ ಬದಲಾಯಿತು. ಇದಕ್ಕೆ ಕಾರಣ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಲಕ್ಷ್ಮಿ ಹೆಬ್ಬಾಳಕರ್ ಆಯ್ಕೆಯಾದರು. ಬೆಳಗಾವಿ ಮಹಾನಗರ ಪಾಲಿಕೆಯ ಅಡಿಯಲ್ಲಿ ಬರುವ ಕೆಲವು ವಾರ್ಡ್ ಗಳು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಇವೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಹಾನಗರ ಪಾಲಿಕೆಯ ವಾರ್ಡ್ ಗಳಿಗೂ ಸ್ಮಾರ್ಟ್ ಸಿಟಿ ಯೋಜನೆಯ ಹಣವನ್ನು ಹಂಚಿಕೆ ಮಾಡಬೇಕು. ಗ್ರಾಮೀಣ ಕ್ಷೇತ್ರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದಾಗಿ ಸ್ಮಾರ್ಟ್ ಸಿಟಿ ಯೋಜನೆ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೂ ಬರುವಂತಾಯಿತು.
ಈ ಮೊದಲು 4 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದ ಲಕ್ಷ್ಮಿ ಹೆಬ್ಬಾಳಕರ್ ಿಂದು ಮತ್ತೆ 7 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿದರು.
7 ಕೋಟಿ ರೂ. ಯೋಜನೆಗೆ ಶಂಕುಸ್ಥಾಪನೆ
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸುಮಾರು 7 ಕೋಟಿ ರೂ. ಗಳ ವೆಚ್ಚದಲ್ಲಿ ಎ ಪಿ ಎಮ್ ಸಿ ಯಾರ್ಡ್ ನಿಂದ ಕಂಗ್ರಾಳಿ ಕೆ ಎಚ್ ಗ್ರಾಮದ ಶಿವಾಜಿ ಮೂರ್ತಿಯವರೆಗೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಶನಿವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಪೂಜೆ ನೆರವೇರಿಸಿದರು.
ಸುಮಾರು 9.20 ಕಿಮೀ ವೈಟ್ ಟಾಪಿಂಗ್ ರಸ್ತೆಯ ನಿರ್ಮಾಣ, ರಸ್ತೆಯ ಎರಡೂ ಬದಿಗೆ ಎರಡು ಮೀಟರ್ ಪುಟ್ಬಾತ್ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆ, ಅಲಂಕಾರಿಕ ಬೀದಿ ದೀಪಗಳ ಅಳವಡಿಕೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ಗುದ್ದಲಿ ಪೂಜೆಯೊಂದಿಗೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಸರಸ್ವತಿ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೃಣಾಲ್ ಹೆಬ್ಬಾಳಕರ, ಕೆಂಪಣ್ಣ ಸನದಿ, ಚಂದ್ರಾ ಪಾಟೀಲ, ಪಕ್ಷದ ಮುಖಂಡರಾದ ಬಾಳು ಪಾಟೀಲ, ಮನೋಹರ್ ಪಾಟೀಲ, ವಿಶಾಲ್ ಭೊಸಲೆ, ಜ್ಯೋತಿಬಾ ಪಾಟೀಲ, ಬಾಳಕೃಷ್ಣ ಪಾಟೀಲ, ಅನಿಲ ಪಾವಸೆ, ಲತಾ ಪಾಟೀಲ, ಅನಿತಾ ಪಾಟೀಲ, ಸುರೇಖಾ, ಪಕ್ಷದ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
ಸಂಬಂಧಿಸಿದ ಸುದ್ದಿಗಾಗಿ ಕ್ಲಿಕ್ ಮಾಡಿ –
ನನ್ನ ಕಷ್ಟ ನನಗಿರಲಿ; ಅಭಿವೃದ್ಧಿ ನಿಮಗಿರಲಿ -11 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ