Kannada NewsKarnataka NewsLatest

ಗಾಣಿಗ ಸಮುದಾಯ ಅಭಿವೃದ್ಧಿಗೆ ಎಲ್ಲ ಸಹಕಾರ -ಲಕ್ಷ್ಮಿ ಹೆಬ್ಬಾಳಕರ್ ಭರವಸೆ

 ಬೆಳಗಾವಿ ತಾಲೂಕಾ ಗಾಣಿಗ ಅಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ

ಪ್ರಗತಿವಾಹಿನಿ ಸುದ್ದಿ,  ಹಿರೇಬಾಗೇವಾಡಿ –  ಗಾಣಿಗ ಸಮುದಾಯದವವರಿಗೆ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಾಯ  ಮಾಡುತ್ತೇನೆ. ಸರಕಾರದಿಂದ ದೊರೆಯುವ ಎಲ್ಲ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಹೇಳಿದರು.
ಹಿರೇಬಾಗೇವಾಡಿಯಲ್ಲಿ ಗುರುವಾರ ಬೆಳಗಾವಿ ತಾಲೂಕಾ ಗಾಣಿಗ ಅಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಯಡಿ ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

 

ಬೆಳಗಾವಿ ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ ಮಾತನಾಡಿ, ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಗಾಣಿಗ ಸಮುದಾಯ ಇದ್ದು; ಕೇಂದ್ರದಲ್ಲಿ ಅನೇಕ ಉದ್ಯೋಗಾವಕಾಶಗಳ ಸೌಲಭ್ಯವಿದೆ. ಆ ಸೌಲಭ್ಯಗಳನ್ನು ಸಮುದಾಯ ಸದುಪಯೋಗ ಪಡಿಸಿಕೊಳ್ಳಬೇಕೆಂದರು.  
ಈ ವೇಳೆ ಬೆಳಗಾವಿ ಜಿಲ್ಲಾ ಗಾಣಿಗ ಸಮುದಾಯದ ಅಧ್ಯಕ್ಷ ರಮೇಶ ಉಟಗಿ ಮಾತನಾಡಿ ಶಿಕ್ಷಣ ಕೈಗಾರಿಕೆ ಔದ್ಯೋಗಿಕ ಕ್ಷೇತ್ರ ದಲ್ಲಿ ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಸಂದರ್ಭದಲ್ಲಿ ಸಿದ್ದಾನಂದ ಗುರೂಜಿ ಜ್ಞಾನ ಮಂದಿರ,  ಗಿರೀಶ್ ಆನಂದ ಗುರೂಜಿ, ಸದ್ಗುರು ನಾಗೇಂದ್ರ ಮಹಾಸ್ವಾಮಿಗಳು, ಶಿವಮೂರ್ತಿ ದೇವರು, ಭೀಮ ಅಜ್ಜನವರು, ಉಳವಪ್ಪ ಅಜ್ಜನವರು,  ಸಿ ಸಿ ಪಾಟೀಲ, ನಾಜರೀನ್ ಕರಿದಾವಲ್, ಶ್ರೀಕಾಂತ್ ಮದುಭರಮಣ್ಣವರ, ಫಕೀರಪ್ಪ ಶಿವರುದ್ರಪ್ಪ ಗಾಣಗಿ,  ರಾಜು ಟೋಪನ್ನವರ, ಶೋಭಾ ಗಾಣಗಿ, ಗೂಳಪ್ಪ ಹೊಸಮನಿ, ಅಡಿವೇಶ ಇಟಗಿ, ಸ್ವಾತಿ ಇಟಗಿ, ಈಶ್ವರ ಜಮಖಂಡಿ, ಫಕೀರಪ್ಪ ಗಾಣಗಿ, ತಮ್ಮಣ್ಣ ಗಾಣಗಿ, ಗಂಗಾಧರ್ ಅಗಸಿಮನಿ, ಮಹೇಶ ಗಾಣಗಿ, ಸುರೇಶ ಇಟಗಿ, ಈರಪ್ಪ ಈಟಿ, ರವಿ ಗಾಣಗಿ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button