Belagavi NewsBelgaum NewsElection NewsKannada NewsKarnataka NewsPolitics

*ನಿಮ್ಗೆ ವೋಟ್ ಹಾಕ್ದೆ ಇನ್ಯಾರಿಗೆ ಹಾಕಲಿ ಅವ್ವ? ನಿಮ್ಮ ಹೆಸರು ಹೇಳಿ ಊಟಾ ಮಾಡ್ತಾ ಇದ್ದೇವಿ ತಾಯಿ*

ಗೃಹಲಕ್ಷ್ಮಿ ಫಲಾನುಭವಿಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಭಯ

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮಿ ಯೋಜನೆಯಿಂದ ನಮಗೆ ಎರಡು ಸಾವಿರ ರೂಪಾಯಿ ಬರ್ತಾಯಿದೆ‌. ಅದರಿಂದ ನಮ್ ಮನೆಯ ಎಷ್ಟೋ ಖರ್ಚು ನಿಭಾಯಿಸುತ್ತಿದ್ದೇವೆ. ನಿಮ್ಮ ಸಹಾಯಾನ ನಾವ್ ಮರೆಯೋದ್ ಹೆಂಗ.. ನಿಮ್ಮ ಹೆಸರು ಹೇಳಿ ಊಟಾ ಮಾಡ್ತಾ ಇದ್ದೇವೆ- ಇದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಂಡು ಮಹಿಳೆಯರ ಗುಂಪೊಂದು ಹೇಳಿದ ಮಾತು.

ಹನುಮಾನ್ ಜಯಂತಿ ಹಿನ್ನೆಲೆಯಲ್ಲಿ ಗೋಕಾಕ್ ತಾಲೂಕಿನ ಸುಲಧಾಳ ಗ್ರಾಮದಲ್ಲಿರುವ ಹನುಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸಚಿವರು ಹೊರಟಿದ್ದರು.
ಆ ವೇಳೆ ಸುಲಧಾಳ ಗ್ರಾಮದ ಮಹಿಳೆಯರು ಸಚಿವರ ಬಳಿ ಬಂದರು. ಕಾರು ನಿಲ್ಲಿಸಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿಸಿದರು.

Home add -Advt

ಕ್ಷಣಾರ್ಧದಲ್ಲೆ ಸಚಿವರನ್ನು ಮಹಿಳೆಯರು ಮುತ್ತಿಕೊಂಡರು. ಬಳಿಕ ನಾನ್ಯಾರು ಎಂದ ಸಚಿವರು ಕೇಳಿದ್ದಕ್ಕೆ, ನಮಗೆ ಗೊತ್ತಿಲ್ವ. ನಮಗೆ ಎರಡು ಸಾವಿರ ರೂಪಾಯಿ ಹಾಕುವ ಮಿನಿಸ್ಟರ್ ಮೇಡಂ ನೀವೆ. ನಿಮ್ಮಿಂದ ನಮಗೆ ತುಂಬಾ ಸಹಾಯ ಆಗಿದೆ. ನಿಮ್ಮ ಮಗನಿಗೆ ನಮ್ಮ ಮತ ಎಂದು ಭರವಸೆ ನೀಡಿದರು.

ಬಡ ಬಗ್ಗರಿಗೆ ನಿಮ್ಮಿಂದ ಸಹಾಯ ಆಗಿದೆ. ನಿಮ್ ಹೆಸರು ಹೇಳಿಕೊಂಡು ನಾವೆಲ್ಲಾ ಅನ್ನ ತಿನ್ನುತ್ತಿದ್ದೇವೆ. ನಿಮಗೆ ವೋಟ್ ಹಾಕ್ತೀವ್ರಿ, ನಿಮ್ ಮಗ ಗೆಲ್ಲೋದ್ ಪಕ್ಕಾ ರೀ ಎಂದು ಮಹಿಳೆಯರು ಹೇಳಿದರು.
ಸಚಿವರು ಅವರಿಗೆಲ್ಲ ಕೈಮುಗಿದು ಹೊರಟರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button