Belagavi NewsBelgaum NewsKarnataka NewsPolitics

*ಖುದ್ದಾಗಿ ತೆರಳಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೂಲಕ ಹೆಸರಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬುಧವಾರ ಬೆಳ್ಳಂ ಬೆಳಗ್ಗೆ ತಾವೇ ಕುದ್ದಾಗಿ ವಿವಿಧೆಡೆ ತೆರಳಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಮೊದಲಿಗೆ, ಗಣೇಶಪುರ ಗ್ರಾಮದಲ್ಲಿ ಸುಮಾರು 2.10 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಸರಸ್ವತಿ ನಗರದ ಶ್ರೀ ಸಿದ್ಧಿ ವಿನಾಯಕ ದೇವಾಲಯ ಆವರಣದಲ್ಲಿ ನಡೆಯುತ್ತಿರುವ ಉದ್ಯಾನವನ ಕಾಮಗಾರಿಯನ್ನು ವೀಕ್ಷಿಸಿ ಗುತ್ತಿಗೆದಾರರಿಗೆ ಸಲಹೆ, ಸೂಚನೆ ಸೂಚನೆ ನೀಡಿದರು. ಫ್ರೀಡಂ ಫೈಟರ್ಸ್ ಕಾಲೋನಿ ಹಾಗೂ ಇನ್ನುಳಿದ ಎರಡು ಉದ್ಯಾನವನಗಳಲ್ಲಿಯೂ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ತದನಂತರ ಪ್ರೆಸ್ ಕಾಲೋನಿಯ ಉದ್ಯಾನವನ ವೀಕ್ಷಿಸಿ, ಅಲ್ಲಿನ ನಾಗರಿಕರಿಗಾಗಿ ಹಸಿರಿನಿಂದ ಕೂಡಿದ ಸುಂದರ ಉದ್ಯಾನವನ ನಿರ್ಮಾಣ ಮಾಡುವಂತೆ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಹಿಂಡಲಗಾ ಗ್ರಾಮದಲ್ಲಿ 2.15 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾದ ವಿವಿಧ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿನ ಮರಾಠಾ ಕಾಲೋನಿ, ವಿನಾಯಕ ನಗರ, ವಿದ್ಯಾನಗರ ಹೌಸಿಂಗ್ ಕಾಲೋನಿ, ಎಂ.ಇ.ಎಸ್. ಕಾಲೋನಿ, ಡಿಫೇನ್ಸ್ ಕಾಲೋನಿ (ಸಿದ್ದಿ ವಿನಾಯಕ ಹೌಸಿಂಗ್ ಸೊಸೈಟಿ) ಈ ಎಲ್ಲ ಪ್ರದೇಶಗಳಲ್ಲಿ ನಡೆಯುತ್ತಿರುವ ಉದ್ಯಾನವನಗಳ ಕಾಮಗಾರಿಗಳನ್ನು ವೀಕ್ಷಿಸಿ, ಸಂಬಂಧಪಟ್ಟವರಿಂದ ಸಂಪೂರ್ಣ ಮಾಹಿತಿ ಪಡೆದರು. ಸಂಬಂಧಪಟ್ಟವರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.

Home add -Advt

ಇದಾದ ನಂತರ, ಸಹ್ಯಾದ್ರಿ ನಗರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ 6.14 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಹ್ಯಾದ್ರಿ ನಗರದ ನಡೆಯುತ್ತಿರುವ ರಸ್ತೆ ನಿರ್ಮಾಣ, ಚರಂಡಿ ಕಾಮಗಾರಿ ಹಾಗೂ ಪೇವರ್ಸ್ ಅಳವಡಿಕೆ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು.


ಇದೇ ವೇಳೆ ಮಹಾಬಳೇಶ್ವರ ದೇವಾಲಯದ ಜೀರ್ಣೋದ್ಧಾರ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳನ್ನು ಸಹ ವೀಕ್ಷಿಸಿದರು. ನಂತರ ಡಾ. ಬಿ.ಆರ್. ಅಂಬೇಡ್ಕರ್ ಭವನ ಆವರಣದಲ್ಲಿ ನಡೆಯುತ್ತಿರುವ ಉದ್ಯಾನವನ ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಡೆಸಿದರು.

ಸಚಿವರೇ ಸ್ವತಃ ಸ್ಥಳಕ್ಕೆ ಆಗಮಿಸಿ ಕಾಮಗಾರಿಗಳ ಪ್ರಗತಿ ಪರಿಶೀಲಿಸುತ್ತಿರುವುದನ್ನು ಕಂಡು ನಾಗರಿಕರು ಆಶ್ಚರ್ಯಚಕಿತರಾದರು.

Related Articles

Back to top button