Belagavi NewsBelgaum NewsPolitics

*ಅಂಬೇಡ್ಕರ್ ಹೆಸರೇ ಅಭಿಮಾನದ ಸಂಕೇತ : ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಅತ್ಯಂತ ಕಷ್ಟದಲ್ಲಿ ಓದಿ ದೇಶಕ್ಕೆ ಮಾದರಿ ಸಂವಿಧಾನ ನೀಡಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರೇ ಅಭಿಮಾನದ ಸಂಕೇತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.


ಗೋಜಗಾ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ವಿಶ್ವರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಯ ಅಳವಡಿಕೆಯ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇಂದು ಮಹಿಳೆಯರು ಸ್ವತಂತ್ರವಾಗಿ ಓಡಾಡುತ್ತಿದ್ದರೆ, ಹಕ್ಕಿನಿಂದ ಮಾತನಾಡುತ್ತಿದ್ದರೆ, ಮಹಿಳೆಯರಿಗೆ ಸಮಾನತೆ ಸಿಕ್ಕಿದ್ದರೆ ಅದು ಅಂಬೇಡ್ಕರ್ ಅವರ ಸಂವಿಧಾನದಿಂದ. ಮಹಿಳೆಗೂ ಜೀವವಿದೆ, ಅಧಿಕಾರ ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸಿ, ಸಂವಿಧಾನದಲ್ಲಿ ಅವಕಾಶ ನೀಡಿದ ಅಂಬೇಡ್ಕರ್ ಅವರು ಆಧುನಿಕ ಬಸವಣ್ಣ ಎಂದು ಹೆಬ್ಬಾಳಕರ್ ಹೇಳಿದರು.

ಮುಂದಿನ ಪೀಳಿಗೆಗೆ ಅಂಬೇಡ್ಕರ್ ಅವರ ಜೀವನ ಆದರ್ಶವಾಗುವ ಉದ್ದೇಶದಿಂದ ಎಲ್ಲೆಡೆ ಅಂಬೇಡ್ಕರ್ ಮೂರ್ತಿ, ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಮಕ್ಕಳಿಗೆ ಮಹಾನ್ ವ್ಯಕ್ತಿಗಳು ಆದರ್ಶವಾಗಬೇಕು ಎನ್ನು ಕಾರಣದಿಂದ ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾನ್ ವ್ಯಕ್ತಿಗಳ ಪುತ್ಥಳಿ ನಿಲ್ಲಿಸಲಾಗುತ್ತಿದೆ ಎಂದು ಅವರು ತಿಲಿಸಿದರು.

Home add -Advt

ಕಾರ್ಯಕ್ರಮದಲ್ಲಿ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಮಹೇಶ ಕಾಂಬಳೆ, ಶಿವಾಜಿ ಯಳಗೆ, ಪದ್ಮರಾಜ ಪಾಟೀಲ, ಕಲ್ಲಪ್ಪ ಕಾಂಬಳೆ, ಪರಶು ನಾಯ್ಕ್, ಪುಂಡಲೀಕ್ ಬಾಂದುರ್ಗೆ, ಲಲಿತಾ ಪಾಟೀಲ, ಶಂಕರ ಸುತಾರ್, ದುರ್ಗಪ್ಪ ದೇವಣ್ಣವರ, ರಾಜಶ್ರೀ ತೋರೆ, ವಿಷ್ಣು ಕಾಂಬಳೆ, ಪಿಡಿಒ ಜಂಬಗಿ, ಜ್ಯೋತಿಬಾ ಚೌಗುಲೆ, ಯುವರಾಜ ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button