Belagavi NewsBelgaum NewsKannada NewsKarnataka NewsLatest

*ಕುಸ್ತಿಪಟುಗಳನ್ನು ಅಭಿನಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮೈಸೂರು ದಸರಾದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಇಬ್ಬರು ಕುಸ್ತಿಪಟುಗಳು ವಿಜೇತರಾಗಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಇಬ್ಬರನ್ನೂ ಅಭಿನಂದಿಸಿದರು.

ವಿಶ್ವ ಪ್ರಸಿದ್ಧ ಮೈಸೂರು ದಸರಾ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿದ್ದ “ದಸರಾ ಕಂಠೀರವ ಕೇಸರಿ – 2025” ರ ಕುಸ್ತಿ ಪಂದ್ಯಾವಳಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ.ಎಚ್ ಗ್ರಾಮದ ಪ್ರತಿಭಾವಂತ ಕುಸ್ತಿಪಟು ಕಾಮೇಶ್ ಪಾಟೀಲ ಅವರು ಅದ್ಭುತ ಪ್ರದರ್ಶನ ನೀಡಿ, ಕಂಠೀರವ ಕೇಸರಿ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇದೇ ವೇಳೆ ನಡೆದ ಸಿ.ಎಂ ಕಪ್ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಮತ್ತೊಬ್ಬ ಯುವ ಪ್ರತಿಭೆ ಪ್ರೇಮ್ ಜಾಧವ್ ಕೂಡ ಗೋಲ್ಡ್ ಮೆಡಲ್ ಗಳಿಸಿದ್ದಾರೆ.

Home add -Advt

ಇವರಿಬ್ಬರ ವಿಶಿಷ್ಟ ಸಾಧನೆಯನ್ನು ಗೌರವಿಸಿ ಸಚಿವರು ಅಭಿನಂದಿಸಿದರು.

ಈ ವೇಳೆ ಕಂಗ್ರಾಳಿ ಕೆ.ಚ್ ಗ್ರಾಮದ ಬಾಲ ಹನುಮಾನ್ ತಾಲೀಮ್ ಮಂಡಳದ ತರಬೇತುದಾರರಾದ ಪ್ರಶಾಂತ ಪಾಟೀಲ, ಬಾಹು ಪಾಟೀಲ ಇದ್ದರು.

Related Articles

Back to top button