Belagavi NewsBelgaum News

*ಮೋದಗಾ ಜಾತ್ರೆಯಲ್ಲಿ ಬಳೆ ತೊಡಿಸಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಮೋದಗಾ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ದೇವಿಗೆ ಉಡಿ ತುಂಬಿ, ಸರ್ವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಇದೇ ವೇಳೆ, ಹಸಿರು ಕಾಜಿನ ಬಳೆಗಳನ್ನು ತೊಟ್ಟು ಸಚಿವರು ಖುಷಿಪಟ್ಟರು. ದೇವಿಯ ಕೃಪೆಯನ್ನು ಪಡೆಯುವ ಸೌಭಾಗ್ಯ ಲಭಿಸಿರುವುದು ಖುಷಿ ತಂದಿದೆ. ಈ ಧಾರ್ಮಿಕ ಸಂಭ್ರಮವು ನಂಬಿಕೆ, ಪರಂಪರೆ ಮತ್ತು ಆಧ್ಯಾತ್ಮಿಕತೆಯ ಮಹತ್ವವನ್ನು ಇಮ್ಮಡಿಗೊಳಿಸಲೆಂದು ಹಾರೈಸುತ್ತೇನೆ ಎಂದು ಸಚಿವರು ಹೇಳಿದರು.

ಹಸಿರು ಕಾಜಿನ ಬಳೆಗಳು ನಂಬಿಕೆಯ ಸಂಕೇತ, ಸೌಭಾಗ್ಯದ ಪ್ರತೀಕ. ಪ್ರತಿ ಘಳಿಗೆಯೂ ದೇವಿಯ ಅನುಗ್ರಹದಿಂದ ಪವಿತ್ರವಾಗಲಿ, ಜಾತ್ರೆಯ ಈ ಶುಭ ಸಂದರ್ಭದಲ್ಲಿ ಎಲ್ಲರ ಜೀವನ ಶ್ರೀಮಂತಿಕೆ ಮತ್ತು ಸುಖದಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದರು.

Home add -Advt

Related Articles

Back to top button