Latest
ಮೂರು ಗಂಟೆ ವಿಚಾರಣೆ ಬಳಿಕ ನಟಿ ಸಂಜನಾ ಗಲ್ರಾಣಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ನಟಿ ಸಂಜನಾ ಗಲ್ರಾಣಿಯವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಬೆಳಿಗ್ಗೆಯಷ್ಟೇ ನಟಿ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಡ್ರಗ್ಸ್ ಜಾಲದ ನಂಟು, ಪಾರ್ಟಿ ಹಾಗೂ ಈಗಾಗಲೇ ಬಂಧನಕ್ಕೀಡಾಗುರುವ ನಟಿಯ ಆಪ್ತರಾಗಿರುವ ರಾಹುಲ್ ಹಾಗೂ ಪೃಥ್ವಿ ಶೆಟ್ಟಿ ಅವರ ಸಂಪರ್ಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಟಿಯನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಸುಮಾರು ಮೂರು ಗಂಟೆಗಳ ಕಾಲ ನಟಿ ಸಂಜನಾ ವಿಚಾರಣೆ ನಡೆಸಿದ ಬಳಿಕ ಸಿಸಿಬಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ನಟಿ ಸಂಜನಾ ವಿಚಾರಣೆಗೆ ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಇನ್ನು ಬಂಧನದ ಬಳಿಕ ಸಂಜನಾ ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.



