Belagavi NewsBelgaum NewsKannada NewsKarnataka News

*ರಸ್ತೆ ಕಾಮಗಾರಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ನ್ಯೂ ವೈಭವ ನಗರದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ  ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್  ಭೂಮಿ‌ ನೆರವೇರಿಸಿ, ಚಾಲನೆ ನೀಡಿದರು. 

Home add -Advt

ಸುಮಾರು 1 ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ನಡೆಯಲಿದೆ.

 ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ  ಸೂಚಿಸಿದರು.

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಥ್ ಬುವಾ, ಸದಸ್ಯರಾದ ಲಕ್ಷ್ಮೀ ಬೆಳಗಾವಿ, ಸುನಿತಾ ಲಕ್ಕಣ್ಣವರ, ದತ್ತಾ ಪಾಟೀಲ, ನಿಸಾರ್ ಮನಿಯಾರ್, ಅರ್ಚನಾ ಪಠಾಣಿ, ಉಮೇಶ್ ಪಾಟೀಲ, ಇಸ್ಮಾಯಿಲ್ ದೇಸಾಯಿ, ಅಯೂಬ್ ಖಾನ್ ಪಠಾಣ್ ಉಪಸ್ಥಿತರಿದ್ದರು.

Related Articles

Back to top button