Latest

ಲಾಲು ಪ್ರಸಾದ್ ಯಾದವ್ ದೇಹ ಲಾಕ್; ದೆಹಲಿಗೆ ಏರ್ ಲಿಫ್ಟ್

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಜಾರಿ ಬಿದ್ದ ಪರಿಣಾಮ ಮೂಳೆ ಮುರಿದಿದೆ. ಒಂದಕ್ಕಿಂತ ಹೆಚ್ಚು ಫ್ರ್ಯಾಕ್ಚರ್ ಆಗಿರುವುದರಿಂದ ಅವರ ದೇಹ ಲಾಕ್ ಆಗಿದ್ದು, ಚಲಿಸಲು ಸಾಧ್ಯವಾಗುತ್ತಿಲ್ಲ ಎಂದು ಲಾಲೂ ಪುತ್ರ ತೇಜಸ್ವಿ ಯಾದವ್ ತಿಳಿಸಿದ್ದಾರೆ.

ಈಗಾಗಲೇ ಲಾಲು ಪ್ರಸಾದ್ ಯಾದವ್ ಅವರನ್ನು ಪಾಟ್ನಾದಿಂದ ಏರ್ ಲಿಫ್ಟ್ ಮಾಡಿ ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ. ಪಟ್ನಾದ ತಮ್ಮ ಮನೆಯಲ್ಲಿಯೇ ಮೆಟ್ಟಿಲುಗಳ ಮೇಲಿಂದ ಲಾಲು ಪ್ರಸಾದ್ ಯಾದವ್ ಜಾರಿ ಬಿದ್ದಿದ್ದು, ಮೂಳೆ ಮುರಿದಿದೆ.

Home add -Advt

ಕಿಡ್ನಿ ಕಸಿಗಾಗಿ ಅವರನ್ನು ಸಿಂಗಾಪುರಕ್ಕೆ ಕರೆದುಕೊಂಡು ಹೋಗುವ ಯೋಜನೆ ಇತ್ತು. ಆದರೆ ಈಗ ಜಾರಿಬಿದ್ದು ಮೂಳೆ ಮುರಿದಿರುವುದರಿಂದ ಏಮ್ಸ್ ವೈದ್ಯರ ಸಲಹೆಯಂತೆ ಮುಂದುವರೆಯುತ್ತೇವೆ ಎಂದು ತಿಳಿಸಿದ್ದಾರೆ.
ಯುವತಿಯರನ್ನು ಚುಡಾಯಿಸಿದ್ದಕ್ಕೆ ಆರಂಭವಾದ ಸಂಘರ್ಷ; ಕೆರೂರು ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್

Related Articles

Back to top button