Latest

ದೇಶದಲ್ಲಿ ಇದೊಂದು ಉತ್ಪಾದನೆ ಸಾಧ್ಯವಾದರೆ 1 ಲಕ್ಷದ ಲ್ಯಾಪ್ ಟಾಪ್ 40 ಸಾವಿರಕ್ಕೆ ಸಿಗುತ್ತೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತದಲ್ಲಿ ಲ್ಯಾಪ್ ಟಾಪ್ , ಮೊಬೈಲ್ ಫೋನ್ ಗಳ ಬೆಲೆ ಹೆಚ್ಚಾಗಲು, ಸೆಮಿಕಂಡಕ್ಟರ್ ಚಿಪ್ ಮತ್ತು ಗ್ಲಾಸ್ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದೇ ಪ್ರಮುಖ ಕಾರಣವಾಗಿದೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ವೇದಾಂತ ಟೆಕ್ನಾಲಜಿಸ್ ಹೆಜ್ಜೆಯಿಟ್ಟಿದೆ.

ಈ ಕುರಿತು ವೇದಾಂತ ಸಂಸ್ಥೆಯ ಚೇರ್ಮನ್ ಅನೀಲ್ ಅಗರವಾಲ್ ಹೇಳಿಕೆ ನೀಡಿದ್ದಾರೆ.

Home add -Advt

ನಾವು ( ವೇದಾಂತ್ ) ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ಉತ್ಪಾದನೆ ಮಾಡುವುದಿಲ್ಲ. ಬದಲಿಗೆ ಲ್ಯಾಪ್ ಟಾಪ್ ಗಳನ್ನು ತಯಾರಿಸಲು ಉತ್ತೇಜಿಸುವ ನಿಟ್ಟಿನಲ್ಲಿ ಸೆಮಿಕಂಡಕ್ಟರ್ ಚಿಪ್ ಮತ್ತು ಗ್ಲಾಸ್ ಗಳನ್ನು ಉತ್ಪಾದಿಸುವ ಉದ್ಯಮವನ್ನು ಸಧ್ಯದಲ್ಲೇ ಗುಜರಾತದಲ್ಲಿ ಪ್ರಾರಂಭಿಸಲಿದ್ದೇವೆ. ಭಾರತದಲ್ಲೇ ಸೆಮಿಕಂಡಕ್ಟರ್ ಚಿಪ್ ಮತ್ತು ಗ್ಲಾಸ್ ಗಳ ತಯಾರಿಕೆ ಸಾಧ್ಯವಾದರೆ 1 ಲಕ್ಷ ಬೆಲೆಯ ಲ್ಯಾಪ್ ಟಾಪ್ 40 ಸಾವಿರ ರೂ. ಅಥವಾ ಅದಕ್ಕಿಂತ ಕಡಿಮೆ ದರಕ್ಕೆ ಸಿಗಲಿದೆ ಎಂದು ಅನೀಲ್ ಅಗರವಾಲ್ ಭರವಸೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಗೆ ಮತ್ತೆ EDಯಿಂದ ಸಮನ್ಸ್ ಜಾರಿ

https://pragati.taskdun.com/latest/d-k-shivakumared-summonsetweet/

Related Articles

Back to top button