ಪ್ರಗತಿವಾಹಿನಿ ಸುದ್ದಿ, ಪಣಜಿ: ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿ ಬೃಹತ್ ಪ್ರಮಾಣದ ಮಾದಕ ಪದಾರ್ಥಗಳನ್ನು ಜಫ್ತಿ ಮಾಡಿದ್ದಾರೆ.
ಈ ಕುರಿತಂತೆ ಕ್ಷೇತ್ರೀಯ ಸಂಚಾಲಕ ಸಮೀರ್ ವಾನಖೇಡೆ ಮಾಹಿತಿ ನೀಡಿ- ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಮಾದಕ ಪದಾರ್ಥ ಪ್ರಕರಣವೊಂದರಲ್ಲಿ ಶಂಕಿತರ ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ಈ ಶಂಕಿತರು ಗೋವಾದಲ್ಲಿರುವ ಮಾಹಿತಿಯ ಮೇರೆಗೆ ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿದರು.
ಈ ಎರಡೂ ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಾದಕ ಪದಾರ್ಥ ಜಫ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಾದಕ ಪದಾರ್ಥ ಕಾಯ್ದೆ ಕಲಂ-೧೯೮೫ ರ ಅಡಿಯಲ್ಲಿ ಹಲವರನ್ನು ವಷಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ