ಬೆಳಗಾವಿಯಿಂದ ಬೆಂಗಳೂರಿಗೆ ಮಹಿಳಾ ಪೊಲೀಸ್ ಸೈಕಲ್ ರ್ಯಾಲಿ

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕೆಎಸ್‌ಆರ್‌ಪಿ, ಉಮೀದ್‌ 1000 ಸೈಕ್ಲೋಥಾನ್‌ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಸಹಯೋಗದಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್‌ ರ‍್ಯಾಲಿ ಏರ್ಪಡಿಸಲಾಗಿದೆ.

ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್‌ ಈ ವಿಷಯ ತಿಳಿಸಿದ್ದಾರೆ. ಶನಿವಾರ ಬೆಳಗಾವಿಗೆ ಆಗಮಿಸಿದ್ದ ಅವರು ಸೈಕಲ್ ರ್ಯಾಲಿ ಸಿದ್ಧತೆಯನ್ನು ಪರಿಶೀಲಿಸಿದರು.

ಮಹಿಳಾ ಸಬಲೀಕರಣ, ದೈಹಿಕ ಆರೋಗ್ಯಕಾಪಾಡುವುದು, ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ

ಡಿ.5ರಂದು ಬೆಳಗಾವಿಯಿಂದ ಹೊರಡುವ ರ್ಯಾಲಿ 9ರಂದು ಬೆಂಗಳೂರು ತಲುಪಲಿದೆ. ಹುಬ್ಬಳ್ಳಿ, ರಾಣೆಬೆನ್ನೂರು, ಚಿತ್ರದುರ್ಗ, ತುಮಕೂರು ಮೂಲಕ 540 ಕಿಮೀ ಸಾಗಿ ಬೆಂಗಳೂರಿಗೆ ತಲುಪಲಿದೆ.

ಸೈಕ್ಲಿಸ್ಟ್‌ಗಳಾಗಿರುವ 50 ಮಹಿಳಾ ಪೊಲೀಸ್‌ ಸಿಬ್ಬಂದಿ, 10 ಮಹಿಳಾ ಐಪಿಎಸ್‌, ಐಎಎಸ್‌, ಕೆಎಎಸ್‌ ಮತ್ತು ಕೆಎಸ್‌ಆರ್‌ಪಿ ಅಧಿಕಾರಿಗಳ ಜತೆ ವಿವಿಧ ಸಂಘ- ಸಂಸ್ಥೆಗಳ 40 ಮಹಿಳಾ ಸೈಕ್ಲಿಸ್ಟ್‌ಗಳು ಸೇರಿ ನೂರು ಮಂದಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮಹಿಳಾ ಸಬಲೀಕರಣ, ಶಿಕ್ಷಣ, ಸ್ವಚ್ಛ ಭಾರತ, ವೃಕ್ಷಾರೋಹಣ, ಬಾಲ್ಯ ವಿವಾಹ ತಡೆ ಕುರಿತು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಸೈಕ್ಲೋಥಾನ್‌ನ ಮುಖ್ಯ ಉದ್ಧೇಶವಾಗಿದೆ. ಮಾರ್ಗಮಧ್ಯೆ ಶಾಲೆ, ಕಾಲೇಜುಗಳು, ಐಟಿಐ ಸಂಸ್ಥೆಗಳಿಗೆ ಭೇಟಿ ನೀಡಲಿದೆ. (ಸಾಂದರ್ಭಿಕ ಚಿತ್ರ)