ಯಲ್ಲಾಪುರ ಬಳಿ ದಾಖಲೆ ಇಲ್ಲದ ಹಣ, ಬಂಗಾರ ವಶ

ಪ್ರಗತಿವಾಹಿನಿ ಸುದ್ದಿ, ಶಿರಸಿ

ದಾಖಲೆ ಇಲ್ಲದೇ ಸಾಗಿಸುತಿದ್ದ ಬಂಗಾರ, ಬೆಳ್ಳಿ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನು  ಜಪ್ತಿ ಮಾಡಿರುವ ಪೊಲೀಸರು, ಐವರನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದೆ. ಕಾರವಾರದಿಂದ ಹುಬ್ಬಳ್ಳಿಗೆ ತೆರಳುತಿದ್ದ ಕಾರಿನಲ್ಲಿ ತಪಾಸಣೆ ವೇಳೆ 2.68 ಲಕ್ಷ ನಗದು, 2.44 ಕೆ.ಜಿ ಬಂಗಾರದ ಆಭರಣ, 3 ಕೆಜಿ ಬೆಳ್ಳಿಯ ವಸ್ತುಗಳು ದೊರತಿವೆ.

ನೇಪಾಳ ಮೂಲದ ಸೀತಾರಾಮ್ (31), ವಿಶ್ವನಾಥ (18), ದುಮ್ಮರ(20), ಬಾಲಸಿಂಗ್ (20), ರಾಮ್ (17)  ಆರೋಪಿಗಳಾಗಿದ್ದು ಎಲ್ಲರೂ  ಹುಬ್ಬಳ್ಳಿಯ ನವನಗರದಲ್ಲಿ ವಾಸ್ತವ್ಯ ಮಾಡಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಯಲ್ಲಾಪುರ ತಹಶಿಲ್ದಾರ್ ಶಂಕರ್ ಜಿ.ಎಸ್ ಹಾಗೂ ಪಿ.ಎಸ್.ಐ ಮಂಜುನಾಥ, ಎ.ಆರ್.ಓ ರುದ್ರಪ್ಪ, ಡಿ.ವೈ.ಎಸ್.ಪಿ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.