Advertisement

ಬಾಡಿಗೆ ಕಟ್ಟಡದಲ್ಲಿರುವ 24 ಕಚೇರಿಗಳು ವಾರದೊಳಗೆ ಸುವರ್ಣ ವಿಧಾನಸೌಧಕ್ಕೆ

ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ಸರಕಾರ ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡಿದ್ದು, ಬಾಡಿಗೆ ಹೆಸರಲ್ಲಿ ಕೊಟ್ಯಂತರ ರೂ. ಸಾರ್ವಜನಿಕ ಹಣ ಕೊಳ್ಳೆ ಹೊಡೆಯುವುದನ್ನು ತಪ್ಪಿಸಲಾಗಿದೆ.

ಧಾರವಾಡದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ವಿಭಾಗೀಯ ಕಚೇರಿ ಸೇರಿದಂತೆ ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ 23 ಕಚೇರಿಗಳು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರವಾಗಲಿದೆ.

ಜುಲೈ ಮೊದಲ ವಾರದಲ್ಲೇ ಈ ಕಚೇರಿಗಳನ್ನು ಸ್ಥಲಾಂತರಿಸಬೇಕು. ಯಾವುದೇ ಹೊಸ ಪೀಠೋಪಕರಣ ಖರೀದಿಸದೆ ಹಳೆಯ ಪೀಠೋಪಕರಣವನ್ನೇ ಬಳಸಬೇಕು ಎಂದು ತಿಳಿಸಲಾಗಿದೆ.

ಕೇವಲ ಪಾರ್ಟಿಶನ್ ಮಾಡಿಕೊಳ್ಳಬೇಕು. ಸಿಬ್ಬಂದಿ ಸಂಚಾರಕ್ಕೆ ರಸ್ತೆಸಾರಿಗೆ ಸಂಸ್ಥೆಯ ಬಸ್ ಹಾಗೂ ಊಟೋಪಹಾರಕ್ಕೆ ಕ್ಯಾಂಟಿನ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.

ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಯಾವ್ಯಾವ ಕಚೇರಿ?

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ,

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ,

ಜಿಲ್ಲಾ ಅಂತರ್ಜಲ ಕಚೇರಿ,

ಪ್ರವಾಸೋದ್ಯಮ ಇಲಾಖೆ,

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ,

ಬೃಹತ್ ನೀರಾವರಿ ಇಲಾಖೆಯ ಭೂ ಸ್ವಾಧೀನ ಮತ್ತು ಪುನರನ್ ನಿರ್ಮಾಣ ಯೋಜನಾ ಕಚೇರಿ,

ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ,

ವಿಶ್ವಕರ್ಮ ಅಭಿವೃದ್ಧಿ ನಿಗಮ,

ಉಪ್ಪಾರ ಅಭಿವೃದ್ದಿ ನಿಗಮ,

ನಿಜಶರಣ ಅಂಬಿಗರ ಅಭಿವೃದ್ಧಿ ನಿಗಮ,

ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮ,

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಉಪವಿಭಾಗ,

ಜಿಲ್ಲಾ ಮಕ್ಕಳ ರಕ್ಷಣಾ ಘಟಕ,

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ,

ಜೀವನೋಪಾಯ ಇಲಾಖೆ,

ಮಾಹಿತಿ ಆಯೋಗ,

ಸಹಕಾರಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ,

ಕೃಷಿ ಮಾರಾಟ ಮಂಡಳಿ,

ವಿದ್ಯುತ್ ಪರಿವೀಕ್ಷಕರ ಕಚೇರಿ,

ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ,

ಕರ್ನಾಟಕ ತರಬೇತಿ ಮತ್ತು ಉದ್ಯೋಗ ಇಲಾಖೆ ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ,

ಕೈಮಗ್ಗ ಮತ್ತು ಜವಳಿ ಇಲಾಖೆ,

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗ ಅಭಿವೃದ್ಧಿ ನಿಗಮ,

ದೇವರಾಜ ಅರಸು ಅಭಿವೃದ್ಧಿ ನಿಗಮ,

ಜಿಲ್ಲಾ ವ್ಯಾವಸ್ಥಾಪಕರು ಮತ್ತು ಉಪಪ್ರಧಾನ ವ್ಯವಸ್ಥಾಪಕರು ಅಂಬೇಡ್ಕರ್ ಅಭಿವೃದ್ಧಿ ನಿಗಮ,

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಕಚೇರಿ.