Advertisement -Home Add

ಬಿಜೆಪಿ ನಾಯಕಿ, ನಟಿ ಖುಷ್ಬೂ ಕಾರು ಅಪಘಾತ

ಪ್ರಾಣಾಪಾಯದಿಂದ ಪಾರಾದ ನಟಿ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಬಿಜೆಪಿ ನಾಯಕಿ, ನಟಿ ಖುಷ್ಬೂ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಭೀಕರ ಅಪಘಾತಕ್ಕೀಡಾಗಿರುವ ಘಟನೆ ತಮಿಳುನಾಡಿನ ಕಡಲೂರು ಬಳಿ ನಡೆದಿದೆ. ಅದೃಷ್ಟವಶಾತ್ ನಟಿ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಿಂದಾಗಿ ಖುಷ್ಬೂ ಅವರ ಕಾರಿನ ಬಾಗಿಲು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಖುಷ್ಬೂ ಬೇರೆ ಕಾರಿನಲ್ಲಿ ತೆರಳಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಖುಷ್ಬೂ, ನನ್ನ ಪತಿ ಸುಬ್ರಹ್ಮಣ್ಯನ ಆರಾಧಕ. ಆ ದೇವರೇ ನನ್ನನ್ನು ರಕ್ಷಿಸಿದ್ದಾನೆ ಎಂದು ತಿಳಿಸಿದ್ದಾರೆ. ಖುಷ್ಬೂ ಬಿಜೆಪಿಯ ವೇಲ ಕಾರ್ಯಕ್ರಮಕ್ಕೆಂದು ಕಡಲೂರಿಗೆ ತೆರಳುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.