KLE1099 Add

ಕನ್ನಡ ದೇವಿ ಪುರಾಣ ಲೋಕಕ್ಕೆ ಪರಿಚಯಿಸಿದ ಕೀರ್ತಿ ಹುಕ್ಕೇರಿ ಶ್ರೀಗಳದ್ದು; ಉಜ್ಜಯಿನಿ ಜಗದ್ಗುರು ಶ್ಲಾಘನೆ

ಹುಕ್ಕೇರಿ ಮಠದಲ್ಲಿ 49ನೇ ಸುವಿಚಾರ ಕಾರ್ಯಕ್ರಮ

Beereshwara 6

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಗವತ್ ಗೀತೆ ಸಿದ್ಧಾಂತ ಸಿಖಾಮಣಿ ಹೀಗೆ ಅನೇಕ ಸಂಸ್ಕೃತ ಗ್ರಂಥಗಳನ್ನು ಸಿಡಿಯನ್ನು ಮಾಡಿ ಜಗತ್ತಿಗೆ ಸಮರ್ಪಿಸುವ ಮಹನಿಯರನ್ನು ನಾವು ನೋಡಿದ್ದೇವೆ. ಆದರೆ ಚಿದಾನಂದ ಅವದೂತರು ರಚಿಸಿದ 18 ಅಧ್ಯಾಯಗಳ ಕನ್ನಡದ ದೇವಿ ಪಾರಾಯಣವನ್ನು ಸುಮಾರು 14 ಲಕ್ಷ ರೂ ವೆಚ್ಚ ಮಾಡಿ ನುರಿತ ಗಾಯಕರಿಂದ ಹಾಡಿಸಿ ಕನ್ನಡದ ಪುರಾಣವನ್ನು ಲೋಕಕ್ಕೆ ಪರಿಚಯಿಸಿದ ಕೀರ್ತಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಈಚೇಗೆ ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ 49ನೇ ಸುವಿಚಾರ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು. ಕನ್ನಡದ ಬಗ್ಗೆ ಮಾತನಾಡುವುದು ಅಷ್ಟೆ ಅಲ್ಲ. ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ಕನ್ನಡದ ಕಾರ್ಯ ಮಾಡಿರುವ ಶ್ರೀಗಳು ಸಿಕ್ಕಿರುವುದು ಜಿಲ್ಲೆಯ ಜನರ ಭಾಗ್ಯ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಸರ್ವಧರ್ಮಿಯರ ಹಿತ ಕಾಪಾಡುವುದರ ಜತೆ ಜತೆಗೆ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿರುವ ಹುಕ್ಕೇರಿ ಹಿರೇಮಠ, ರಾಜ್ಯದಲ್ಲಿರುವ ಯಾವುದೇ ಮಠಗಳು ಮಾಡದ ಕಾರ್ಯವನ್ನು ಹುಕ್ಕೇರಿ ಶ್ರೀಗಳು ಮಾಡಿದ್ದಾರೆ. ಅನೇಕ ಸಂಸ್ಕೃತದ ಗ್ರಂಥಗಳನ್ನು ಆಧುನಿಕ ದಿನಮಾಗಳಲ್ಲಿ ಭಕ್ತರಿಗೆ ಅನಕೂಲವಾಗುವ, ಅಭಿರುಚಿಗೆ ತಕ್ಕಂತೆ ಸಮಾಜಕ್ಕೆ ಮನವರಿಕೆಯಾಗುವ ಹಾಗೆ ಸಿಡಿ ರೂಪದಲ್ಲಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಹೇಳಿದರು.

ಆರ್‌ಎಸ್‌ಎಸ್ ಪ್ರಮುಖ ಮನೋಹರ ಮಠದ ಅವರು ಮಾತನಾಡಿ, ದೇಶದಲ್ಲಿ ಅಧಿಕೃತವಾಗಿ 1ಲಕ್ಷ 30 ಸಾವಿರ ಮಠಗಳಿವೆ. ಈ ಮಠಗಳನ್ನು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿವೆ. ಭಾರತ ಎಂದರೆ ಅದು ಧರ್ಮಭೂಮಿ ಎಂದರು.

ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಕನ್ನಡ ಕಾರ್ಯಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ಕನ್ನಡಿಗರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಸಿಹಿ ಹೋಳಿಗೆ ಊಣಬಡಿಸಿದ್ದು, ಶ್ರೀಗಳಿಗೆ ಸಲ್ಲುತ್ತದೆ. ಅಷ್ಟೆ ಅಲ್ಲ, ಎಲ್ಲಾ ಕನ್ನಡದ ಕಾರ್ಯಗಳಿಗೆ ಸ್ಪಂದಿಸುತ್ತಾರೆ. ಕನ್ನಡದ ಅನೇಕ ಗ್ರಂಥಗಳನ್ನು ಶ್ರೀಮಠದಿಂದ ಹೊರ ತಂದಿದ್ದಾರೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವು ಇಂದು ಕಿತ್ತೂರು ಕರ್ನಾಟಕದ ವಿಜಯೋತ್ಸವದ ಸಂದರ್ಭದಲ್ಲಿದ್ದೇವೆ. 49ನೇ ಸುವಿಚಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಉಜ್ಜಯಿನಿ ಜಗದ್ಗುರುಗಳ ಆಶೀರ್ವಾದದಲ್ಲಿ ನಾವೆಲ್ಲರೂ ದೇಶಕ್ಕಾಗಿ, ನಾಡಿಗಾಗಿ ನಮ್ಮನ್ನು ನಾವು ಸಮರ್ಪಿಸಬೇಕಿದೆ ಎಂದರು.
ಸತ್ಯಗೀರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಜಯ ಶಾಸ್ತ್ರೀ, ಮಹಾಂತೇಶ ಶಾಸ್ತ್ರೀ, ವಿರುಪಾಕ್ಷಯ್ಯ ನೀರಲಗಿಮಠ, ವಿದ್ವಾನ್ ಚಂದ್ರಶೇಖರ ಸ್ವಾಮೀಜಿ ಉಪಸ್ಥಿತರಿದ್ದರು. ಬಸವರಾಜ ಹಳಂಗಳಿ ಸ್ವಾಗತಿಸಿದರು. ನವೀನ ತಿಮ್ಮಾಪುರಮಠ, ಬಸವನಕುಡಚಿ ನೀಲಕಂಠ ಶಾಸ್ತ್ರಿ, ಪವನಕುಮಾರ ಶಾಸ್ತ್ರೀಗಳಿಗೆ ಮತ್ತು ಅಬ್ದುಲ್ ಅವರಿಗೆ ಆಶೀರ್ವದಿಸಲಾಯಿತು.

ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡನೇ ಬಾರಿ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾದ ಮಂಗಳಾ ಮೆಟಗುಡ್ಡ ಅವರಿಗೆ 17 ಜಿಲ್ಲೆಯ ಆರ್‌ಎಸ್‌ಎಸ್‌ನ ಮನೋಹರ ಮಠದ ಅವರಿಗೆ ಉಜ್ಜಯಿನಿ ಜಗದ್ಗುರುಗಳು ಸನ್ಮಾನಿಸಿದರು.
ಲಾಕ್ ಡೌನ್ ಗೊಂದಲ : ಸರ್ಕಾರದ ನಿರ್ಧಾರ ಪ್ರಕಟಿಸಿದ ಸಿಎಂ

You cannot copy content of this page