Advertisement -Home Add

ಸಿಸಿಬಿ ಅಧಿಕಾರಿ ಹೆಸರಲ್ಲಿ ಉದ್ಯಮಿಗೆ ಬ್ಲ್ಯಾಕ್ ಮೇಲ್

ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಸಿಬಿ ಅಧಿಕಾರಿ ಹೆಸರಲ್ಲಿ ಉದ್ಯಮಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪಿ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಧ್ಯ ಆರೋಪಿ ಶ್ರೀನಿವಾಸ್ ನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಮಂಜುನಾಥ್ ಲಾಡ್ಜ್ ನಲ್ಲಿ ಯುವತಿಯೊಂದಿಗೆ ಇದ್ದುದನ್ನು ನೋಡಿದ್ದ ಶ್ರೀನಿವಾಸ್. ಇದೇ ವಿಚಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಹಣ ನೀಡದಿದ್ದರೆ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಲಕ್ಷಾಂತರ ರೂ ಹಣವನ್ನು ಉದ್ಯಮಿಯಿಂದ ಪಡೆದು ಅಂತಿಮವಾಗಿ ವಿಡಿಯೋ ಡಿಲಿಟ್ ಮಾಡಲು 4 ಲಕ್ಷ ರೂ ಗೆ ಬೇಡಿಕೆ ಇಟ್ಟಿದ್ದಾನೆ.

ಕೊನೆಗೂ ಉದ್ಯಮಿ ಪೀಣ್ಯ ಠಾಣೆಗೆ ದೂರು ನೀಡಿದ್ದು, ಇದೀಗ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಲಾಗಿದೆ.