Yoga add Final 1
KLE1099 Add

ತಂಗಿಯನ್ನು ಚುಡಾಯಿಸಿದ ಯುವಕ; ಮನಬಂದಂತೆ ಚಾಕುವಿನಿಂದ ಇರಿದ ಅಣ್ಣಂದಿರು

ಎಚ್ಚರಿಕೆ ನೀಡಿದರೂ ಹಳೇ ಚಾಳಿ ಮುಂದುವರೆಸಿದ್ದ ಯುವಕ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ತಂಗಿಯನ್ನು ಚುಡಾಯಿಸಿದ ಯುವಕನನ್ನು ಯುವತಿಯ ಅಣ್ಣಂದಿರು ಚಾಕುವಿನಿಂದ ಮನಬಂದಂತೆ ಇರಿದ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ.

ಚಂದ್ರಶೇಖರ್ ಚಾಕುವಿನಿಂದ ಇರಿತಕ್ಕೊಳಗಾದ ಯುವಕ. ಚಂದ್ರಶೇಖರ್ ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯ ಯುವತಿಯನ್ನು ಚುಡಾಯಿಸಿದ್ದ ಎನ್ನಲಾಗಿದೆ. ತಂಗಿಯನ್ನು ಚುಡಾಯಿಸಿದ್ದಕ್ಕೆ ಅಣ್ಣಂದಿರಾದ ಕಿರಣ್ ಹಾಗೂ ಅಭಿ, ಚಂದ್ರಶೇಖರ್ ಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಆದರೂ ತನ್ನ ಹಳೇ ಚಾಳಿ ಮುಂದುವರೆಸಿದ್ದ ಚಂದ್ರಶೇಖರ್ ನನ್ನು ಚಾಕುವಿನಿಂದ ಮನಬಂದಂತೆ ಇರಿದು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಚಂದ್ರಶೇಖರ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಕಿಡ್ನಾಪ್!

Home add- Bottom