Reporter wanted
Crease wise (28th Jan)

ವ್ಯಾಕ್ಸಿನ್ ಪಡೆದ 580 ಜನರಲ್ಲಿ ಸೈಡ್ ಎಫೆಕ್ಟ್

ಮೂರು ದಿನಗಳಲ್ಲಿ 3,81,305 ಜನರಿಗೆ ಲಸಿಕೆ ನೀಡಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಿದ್ದು, ಮೂರು ದಿನಗಳಲ್ಲಿ 580 ಜನರಿಗೆ ಸೈಡ್ ಎಫೆಕ್ಟ್ ಆರಂಭವಾಗಿದೆ.

ಸೋಮವಾರ ದೇಶಾದ್ಯಂತ 1,48,266 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದು, 133 ಜನರಿಗೆ ಅಡ್ಡಪರಿಣಾಮವುಂಟಾಗಿದೆ. 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ದಿನಗಳಲ್ಲಿ 3,81,305 ಆರೋಗ್ಯ ಕಾರ‍್ಯಕರ್ತರಿಗೆ ಲಸಿಕೆ ನೀಡಲಾಗಿದ್ದು, ಈ ಪೈಕಿ 580 ಜನರಲ್ಲಿ ಅಡ್ದ ಪರಿಣಾಮ ಉಂಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಉತ್ತರ ಪ್ರದೇಶದ ಮೊರಾದಾಬಾದ್‌ ನಗರದ ದೀನ್‌ದಯಾಳ್‌ ಉಪಾಧ್ಯಾಯ ಸರಕಾರಿ ಆಸ್ಪತ್ರೆಯ ವಾರ್ಡ್‌ ಬಾಯ್‌ ‘ಕೋವಿಶೀಲ್ಡ್‌’ ಲಸಿಕೆ ಹಾಕಿಸಿಕೊಂಡಿದ್ದರಿಂದಲೇ ಮೃತಪಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ಆದರೆ ಸರ್ಕಾರ ಇದನ್ನು ಅಲ್ಲಗಳೆದಿದೆ.