Advertisement -Home Add

ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ ಕೊರೊನಾ ಸೋಂಕು

24 ಗಂಟೆಯಲ್ಲಿ 64,399 ಜನರಲ್ಲಿ ಕೊವಿಡ್ ಪಾಸಿಟೀವ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು, 64,399 ಜನರಲ್ಲಿ ಕೊವಿಡ್ ಪಾಸಿಟೀವ್ ಬಂದಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 64,399 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 21,53,011ಕ್ಕೆ ಏರಿಕೆಯಾಗಿದೆ.

ಈ ಪೈಕಿ 14,80,885 ಸೋಂಕಿತರು ಗುಣಮುಖರಾಗಿದ್ದು, ಒಂದೇ ದಿನ 861 ಮಂದಿ ಸೋಂಕಿತರು ಸಾವನ್ನಪ್ಪುಪ್ಪಿದ್ದಾರೆ ಈ ಮೂಲಕ ದೇಶದಲ್ಲಿ 43,379 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ 6,28,747 ಸಕ್ರಿಯ ಪ್ರಕರಣಗಳಿವೆ.