Advertisement -Home Add
Crease wise (28th Jan)
KLE1099 Add

ಚುನಾವಣೆಗೂ ಕಾಂಗ್ರೆಸ್ ಸಿದ್ಧ…!

ಯಾವುದಕ್ಕೂ ಕಾಂಗ್ರೆಸ್ ಕಾಯುತ್ತ ಕೂರಲ್ಲ ಎಂದ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ತೀವ್ರಗೊಂಡ ಬೆನ್ನಲ್ಲೇ ಕಾಂಗ್ರೆಸ್ ಮುಂದಿನ ನಡೆಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಂದು ಮಹತ್ವದ ಚರ್ಚೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ನಿವಾಸದಲ್ಲಿ ಚರ್ಚೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಎಲ್ಲಾ ಸಮಯದಲ್ಲೂ ಎಲ್ಲದಕ್ಕು ಸಿದ್ಧವಾಗಿದ್ದು, ಚುನಾವಣೆಗೂ ಕೂಡ ರೆಡಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಯಾವುದಕ್ಕು ಕಾಯುತ್ತಾ ಕೂರುವುದಿಲ್ಲ. ಮರ ಬಿತ್ತು, ಕೊಂಬೆ ಬಿತ್ತು ಎಂದು ನೋಡುತ್ತಾ ಸುಮ್ಮನೇ ಇರುವುದೂ ಇಲ್ಲ. ಎಲ್ಲದಕ್ಕೂ ಸದಾ ಸಿದ್ಧವಾಗಿರುತ್ತೆ. ಇಂದು ಸಿದ್ದರಾಮಯ್ಯ ಅವರೊಂದಿಗೆ ನಡೆದ ಚರ್ಚೆ ಬಗ್ಗೆ ಬಹಿರಂಗವಾಗಿ ಯಾವುದೇ ಮಾಹಿತಿ ನೀಡಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಪಿಯು ಬೋರ್ಡ್