Beereshwara Add 10
KLE1099 Add

ಹಲೋ ಕಂದಾಯ ಸಚಿವರೇ; ಪ್ರಥಮ ಕರೆಯ ಫಲಾನುಭವಿ ಗೋಕಾಕ್ ನ ಶಿಲ್ಪಾ ರೆಡ್ಡಿಗೆ ಪಿಂಚಣಿ ವಿತರಣೆ

ಮನೆ ಬಾಗಿಲಿಗೆ ಹೋಗಿ ಪಿಂಚಣಿ ಆದೇಶ ಪ್ರತಿ ನೀಡಿದ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಲೋ ಕಂದಾಯ ಸಚಿವರೇ ಸಹಾಯ ವಾಣಿ ಮೂಲಕ ರಾಜ್ಯದಲ್ಲಿಯೇ ಪ್ರಥಮ ಕರೆಯ ಫಲಾನುಭವಿಯಾದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಕಾಕ ನಗರದ ಶಿಲ್ಪಾ ರಡ್ಡಿ ಅವರಿಗೆ ಪಿಂಚಣಿ ಆದೇಶ ಪ್ರತಿಯನ್ನು ಅಧಿಕಾರಿಗಳು ಮನೆಗೆ ಹೋಗಿ ತಲುಪಿಸಿದ್ದಾರೆ.

ಗೋಕಾಕ ಗ್ರಾಮಲೆಕ್ಕಾಧಿಕಾರಿ ಅವರು, ಶಿಲ್ಪಾ ರೆಡ್ಡಿ ಅವರಿಗೆ ವಿಧವಾ ಪಿಂಚಣಿಯ ಆದೇಶ ಪ್ರತಿಯನ್ನು ಮನೆಬಾಗಿಲಿಗೆ ಹೋಗಿ ವಿತರಿಸಿದರು.

ಕಂದಾಯ ದಾಖಲೆಗಳು ಸಹಿತ ಪಿಂಚಣಿಯನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸುವ ನೂತನ ಯೋಜನೆ ಹಲೋ ಕಂದಾಯ ಸಚಿವರೇ ಸಹಾಯವಾಣಿಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಆರಂಭಿಸಿದೆ. ಈ ಮೂಲಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಕೇವಲ 72 ಗಂಟೆಗಳಲ್ಲಿ ನಿಮ್ಮ ಪಿಂಚಣಿ ಮನೆ ಬಾಗಿಲಿಗೆ ತಲುಪಲಿದೆ.
ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್: 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

You cannot copy content of this page