Advertisement -Home Add
Chandargi Sports School
Wanted Home Add

ಬಿಜೆಪಿಯ ವಧು; ಕಾಂಗ್ರೆಸ್ ನ ವರ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು

ರಾಜಕೀಯವಾಗಿ ಪರಸ್ಪರ ಎದುರಾಳಿ ಪಕ್ಷಗಳಾದರೂ ಪ್ರೀತಿಯಲ್ಲಿ ಒಂದಾದರು

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ರಾಜಕೀಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಎದುರಾಳಿ ಪಕ್ಷಗಳು. ಹೀಗಿರುವಾಗ ಕಲಬುರ್ಗಿಯಲ್ಲೊಂದು ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳ ನಡುವೆ ಪ್ರೀತಿಯಾಗಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಯುವತಿ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕು ಪಂಚಾಯತ್ ಅಧಕ್ಷೆ ರುಕ್ಮಿಣಿ ಜಮಾದಾರ. ಯುವಕ ಅದೇ ತಾಲೂಕು ಪಂಚಾಯತ್ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ. ತಾಲೂಕು ಪಂಚಾಯತ್ ಒಂದೇ ಯಾಗಿದ್ದರೂ ಇವರಿಬ್ಬರ ಪಕ್ಷಗಳು ಮಾತ್ರ ಬೇರೆ ಬೇರೆ. ರುಕ್ಮಿಣಿ ಜಮಾದಾರ ಚೌಡಾಪುರ ತಾಲೂಕು ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ, ತಾಲೂಕು ಪಂಚಾಯತ್ ಅಧ್ಯಕ್ಷ ಗದ್ದುಗೆ ಏರಿದವರು.

ಭೀಮಾಶಂಕರ ಹೊನ್ನಕೇರಿ ಕರ್ಜಗಿ ತಾಲೂಕು ಪಂಚಾಯತ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದು ಉಪಾಧ್ಯಕ್ಷ ಸ್ಥಾನ ಅಲಂಕರಿಸಿದವರು.

ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇವರಿಬ್ಬರ ನಡುವೆ ಪ್ರೀತಿ ಅಂಕುರವಾಗಿದೆ. ಕೊನೆಗೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.