Kannada Rajyotsava – Home Add
Valmiki Jayanti Add

ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಐಪಿಎಸ್ ಅಧಿಕಾರಿ

ಡಿಜಿ ಪುರುಷೋತ್ತಮ ಶರ್ಮಾ ವಿರುದ್ಧ ಕ್ರಮ

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಹಿರಿಯ ಐಪಿಎಸ್ ಅಧಿಕಾರಿ ಪುರುಷೋತ್ತಮ ಶರ್ಮಾ, ಪತ್ನಿಯನ್ನು ಮನ ಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮಧ್ಯಪ್ರದೇಶದ ಡಿಜಿ ಪುರುಷೋತ್ತಮ ಶರ್ಮಾ ಎಂಬುವವರು ಮನೆಯಲ್ಲಿ ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸುತಿದ್ದ ಹಾಗೂ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಹಿಡಿದು ಮನಬಂದಂತೆ ಥಳಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದತೆ ಕರ್ತವ್ಯದಲ್ಲಿದ್ದ ಅಧಿಕಾರಿಯಿಂದ ಕಾನೂನುಬಾಹಿರ ಕೃತ್ಯ ಹಿನ್ನೆಲೆಯಲ್ಲಿ ಡಿಜಿ ಪುರುಷೋತ್ತಮ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕರ್ತವ್ಯದಿಂದ ವಜಾಗೊಳಿಸಲಾಗಿದೆ.

ಅಪ್ಪನ ಕೃತ್ಯವನ್ನು ಮಗ ಪಾರ್ಥ ರಾಜ್ಯ ಗೃಹ ಸಚಿವರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದ. ಅಲ್ಲದೇ ತಂದೆಯ ವಿರುದ್ಧ ದೂರು ದಾಖಲಿಸಿದ್ದ.