Advertisement -Home Add
Crease wise (28th Jan)
KLE1099 Add

ರಾಜಭವನದ ಸಿಬ್ಬಂದಿಯಲ್ಲೂ ಕೊರೊನಾ ಪಾಸಿಟೀವ್

ಸೆಲ್ಫ್ ಕ್ವಾರಂಟೈನ್ ಆಗಲು ಮುಂದಾದ ರಾಜ್ಯಪಾಲ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಇದೀಗ ರಾಜಭವನದ 16 ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟೀವ್ ಇರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲ ಕೊಶ್ಯಾರಿ ಸ್ವಯಂ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ರಾಜಭವನದ ಸಿಬ್ಬಂದಿಯನ್ನು ಕೂಡ ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 16 ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಈ ನಡುವೆ ಹೈದರಾಬಾದ್ ನಲ್ಲಿರುವ ರಾಜಭವನದಲ್ಲಿ ಕೂಡ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ರಾಜ್ಯಪಾಲರಾದ ತಮಿಳರಸಿಯವರ ವರದಿ ನೆಗೆಟೀವ್ ಬಂದಿದೆ ಎಂದು ತಿಳಿದುಬಂದಿದೆ.