Advertisement

ಮದುವೆಯಾದ ಒಂದೇ ತಿಂಗಳಲ್ಲಿ ಪತಿಯ ಅಕ್ರಮ ಸಂಬಂಧ ಬಯಲು; ನೊಂದ ಪತ್ನಿ ಆತ್ಮಹತ್ಯೆ

ಪತಿ ಹಾಗೂ ಯುವತಿಯ ಅಶ್ಲೀಲ ಫೋಟೋಗಳು ಮೊಬೈಲ್ ನಲ್ಲಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮದುವೆಯಾದ ಒಂದು ತಿಂಗಳಲ್ಲೇ ಪತಿಯ ಅಕ್ರಮ ಸಂಬಂಧ ಬಗ್ಗೆ ತಿಳಿದ ಪತ್ನಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಭಾವನಾ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಒಂದು ತಿಂಗಳ ಹಿಂದಷ್ಟೇ ಭಾವನಾ ಸಾಫ್ಟ್ ವೇರ್ ಎಂಜಿನಿಯರ್ ಅಜಯ್ ಎಂಬಾತನನ್ನ ವಿವಾಹವಾಗಿದ್ದಳು. ಆದರೆ ಪತಿ ಅಜಯ್‍ ಮತ್ತೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಆಕೆಯ ಜೊತೆ ಅಶ್ಲೀಲವಾಗಿ ಇದ್ದಂತಹ ಫೋಟೋಗಳು ಪತಿಯ ಮೊಬೈಲ್ ನಲ್ಲಿದ್ದವು. ಇದನ್ನು ನೋಡಿದ್ದ ಭಾವನಾ ಶಾಕ್ ಆಗಿದ್ದಾಳೆ.

ಈ ವಿಚಾರ ಎರಡು ಕುಟುಂಬದವರಿಗೂ ಗೊತ್ತಾಗಿದೆ. ನಂತರ ಎಲ್ಲರೂ ಮಾತನಾಡಿ ಮತ್ತೆ ರಾಜೀ ಮಾಡಿಸಿದ್ದರು. ಆದರೂ ಬೇಸತ್ತ ಭಾವನಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಜಯ್ ತಂದೆ ರಾಮಪ್ರಸಾದ್ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.